

ಬಂಟ್ವಾಳ: ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾ ಪ್ರೌಢಶಾಲೆಗೆ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ದಾನಿಗಳು ಕೊಡಮಾಡಿದ ಸಮವಸ್ತ್ರ ಮತ್ತು ಲೇಖನ ಸಾಮಗ್ರಿ ವಿತರಣೆ ಮತ್ತು ಎಸ್ಸೆಸ್ಸೆಲ್ಸಿ ಸಾಧಕರಿಗೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಶುಕ್ರವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.
ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು. ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಸತ್ಯಶಂಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕ ಉಳಿ ದಾಮೋದರ ನಾಯಕ್ ಮಾತನಾಡಿದರು. ಪುತ್ತೂರು ಪ್ರಶಾಂತಿ ಸದ್ಭಾವನಾ ಟ್ರಸ್ಟ್ ಸಂಚಾಲಕ ಮಧುಸೂದನ ನಾಯಕ್ ಉಪನ್ಯಾಸ ನೀಡಿದರು.
ಕಜೆಕಾರು ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಣಶೇಖರ ಕೊಡಂಗೆ, ಉಳಿ ಗ್ರಾಪಂ ಅಧ್ಯಕ್ಷೆ ರೇವತಿ ಮುದಲಾಡಿ, ಉಪಾಧ್ಯಕ್ಷ ವಸಂತ ಸಾಲ್ಯಾನ್ ರಾಮನಗರ, ಪಿಡಿಒ ವಿದ್ಯಾಶ್ರೀ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಡಿ., ಉಳಿಬಲು ಸ.ಹಿ.ಪ್ರಾ.ಶಾಲಾ ಶಿಕ್ಷಕ ಅಕ್ಬರ್ ಆಲಿ, ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಕೆ.ರಾಜೇಂದ್ರ ಕಕ್ಯಪದವು, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಜತೆ ಕಾರ್ಯದರ್ಶಿ ಲಕ್ಷ್ಮಣ ಭಂಡಾರಿ ಪುಣ್ಕೆದಡಿ, ಉಪಾಧ್ಯಕ್ಷ ನಾರಾಯಣ ರೈ, ಶಿಕ್ಷಕಿ ವಿಶಾಲಾಕ್ಷಿ, ಬೇಂಗಿಲ ಶಾಲೆ ಮುಖ್ಯಶಿಕ್ಷಕ ದಿನೇಶ್ ಗೌಡ, ಉಳಿ ಪ್ರಾ.ಕೃ.ಸ.ಸಂಘದ ಅಧ್ಯಕ್ಷ ಸುರೇಶ್ ಮೈರ, ಶಾಲಾಭಿವೃದ್ಧಿ ಸಮಿತಿ ಕೋಶಾಧಿಕಾರಿ ತುಷಾರ್ ಆರ್.ಭಂಡಾರಿ, ಪ್ರಮುಖರಾದ ಮುತ್ತಪ್ಪ ಗೌಡ, ವೀರೇಂದ್ರ ಕುಮಾರ್ ಜೈನ್, ಜಗನ್ನಾಥ ಶೆಟ್ಟಿ ಮತ್ತಿತರರಿದ್ದರು.
ಬಾಚಕೆರೆ ದೇವಸ್ಥಾನ ಧರ್ಮದರ್ಶಿ ದೇಜಪ್ಪ ಬಾಚಕೆರೆ(ದೈವಾರಾಧನೆ), ಪದ್ಮನಾಭ ಶೆಟ್ಟಿ ಮಜ್ಜಿಗುಡ್ಡೆ(ಭಜನೆ, ಸತ್ಸಂಗ), ಕಕ್ಯಪದವು ಶ್ರೀ ಬ್ರಹ್ಮಬದರ್ಕಳ ಗರೊಡಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್(ಧಾರ್ಮಿಕ), ಡೀಕಪ್ಪ ಗೌಡ ಕೆಳಗಿನ ಅಗಲ(ಕೃಷಿ), ಶಿವಾನಂದ ಮೈರ(ಕಂಬಳ) ಅವರಿಗೆ ಪಂಚದುರ್ಗಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್ಸೆಸ್ಸೆಲ್ಸಿ ಸಾಧಕರಾದ ಪ್ರಶಾಂತ್, ಶರಣ್ಯಾ, ಶ್ರಾವ್ಯಾ, ಪ್ರತೀಕ್ಷಾ, ಶ್ರೇಯತ್, ಆಯಿಷತುಲ್ ನಾಝಿಮಾ, ಕುಶಿ ನಾಯ್ಕ, ಫಾತಿಮತುಲ್ ಅಜ್ಮಿಯಾ, ಸಿಂಚನಾ ಅವರನ್ನು ಸನ್ಮಾನಿಸಲಾಯಿತು. ಯೋಗೀಶ್ ಕುಮಾರ್ ವಂದಿಸಿದರು. ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.