ಕುಮಾರವ್ಯಾಸರಿಂದ ಕನ್ನಡದ ಏಕೀಕರಣ

suja
Published on

ಗಂಗೊಳ್ಳಿ: ಕನ್ನಡನಾಡು ಕಂಡ ಅತ್ಯದ್ಭುತ ಕವಿ ಕುಮಾರವ್ಯಾಸ. ಕನ್ನಡ ನೆಲದ ಮನೆ ಮನಗಳಲ್ಲಿ ಭಾರತ ಕತೆಯನ್ನು ನೆಲೆಯಾಗುವಂತೆ, ಆಪ್ತವಾಗುವಂತೆ ಮಾಡಿದ ಧೀಮಂತ ಕವಿ. ನಾಡಿನ ಸಮಸ್ತ ವಿದ್ವಾಂಸರನ್ನೂ, ಜನ ಸಾಮಾನ್ಯರನ್ನೂ ತನ್ನ ಕಾವ್ಯ ಸೊಬಗಿನಿಂದ ಬೆರಗುಗೊಳಿಸಿ ಕನ್ನಡದ ಏಕೀಕರಣವನ್ನು ಸಾಧಿಸಿದ ಕವಿ ಎಂದು ಕುಂದಾಪುರದ ಕರ್ನಾಟಕ ಗಮಕ ಕಲಾ ಪರಿಷತ್ತು ಘಟಕ ಅಧ್ಯಕ್ಷ ಎಚ್. ಸುಜಯೀಂದ್ರ ಹಂದೆ ಹೇಳಿದರು.

ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ ಕುಂದಾಪುರ ಘಟಕ ಆಯೋಜನೆಯಲ್ಲಿ ಶನಿವಾರ ಕುಮಾರವ್ಯಾಸ ಸ್ಮತಿ ಮತ್ತು ಗಮಕ ಕಲಾ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಗೋಪಾಲ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಜಿಎಸ್‌ವಿಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಶುಭಹಾರೈಸಿದರು. ಗಮಕಿ ಕಾವ್ಯ ಹಂದೆ ಕುಮಾರವ್ಯಾಸನ ಕರ್ಣ ಭೇದನ ಪ್ರಸಂಗದ ಕಾವ್ಯ ಭಾಗವನ್ನು ವಿವಿಧ ರಾಗಗಳಲ್ಲಿ ಪ್ರಾತ್ಯಕ್ಷಿಕೆ ನಡೆಸಿದರು. ಸುಜಯೀಂದ್ರ ಹಂದೆ ವ್ಯಾಖ್ಯಾನ ನೀಡಿದರು. ಶ್ರೀಧರ ಗಾಣಿಗ ಸ್ವಾಗತಿಸಿದರು. ಆದಿನಾಥ ಕಿಣಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net