ರೈಲಿಗೆ ಸಿಲುಕಿ ಅಪರಿಚಿತ ಸಾವು: ಬಲಗೈ ಮೇಲಿದೆ ‘ಆರ್‌ಎ’ ಅಕ್ಷರದ ಹಚ್ಚೆ

Crime
Published on

ಮಂಡ್ಯ: ನಾಗನಹಳ್ಳಿ-ಪಾಂಡವಪುರ ರೈಲ್ವೆ ನಿಲ್ದಾಣಗಳ ನಡುವೆ ಶುಕ್ರವಾರ ರೈಲಿಗೆ ಸಿಲುಕಿ ಅಪರಿಚಿತ ಯುವಕ ಮೃತಪಟ್ಟಿದ್ದಾನೆ.

ಸುಮಾರು 25 ರಿಂದ 30 ವರ್ಷದವನಾಗಿದ್ದು, 5.6 ಅಡಿ ಎತ್ತರವಿದ್ದಾನೆ. ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಬಲಗೈ ಮೇಲೆ ಇಂಗ್ಲೀಷ್ ‘ಆರ್‌ಎ’ ಅಕ್ಷರದ ಹಚ್ಚೆ ಇದೆ. ಮೈಮೇಲೆ ಬಿಳಿಬಣ್ಣದ ನೀಲಿ ಬಣ್ಣದ ಚೆಕ್ಸ್ ಅಂಗಿ, ನೀಲಿಬಣ್ಣದ ಜೀನ್ಸ್ ಪ್ಯಾಂಟ್, ಬೆಳ್ಳಿಯಂತೆ ಹೋಲುವ ಬ್ರಾಸ್‌ಲೈಟ್, ಉಂಗುರ ಹಾಗೂ ಕುತ್ತಿಗೆ ಚೈನ್ ಇದೆ. ಮೃತದೇಹವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿಡಲಾಗಿದೆ. ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net