ಅಪರಿಚಿತ ಪುರುಷ ಶವ ಪತ್ತೆ

crime
Published on

ಕೊಳ್ಳೇಗಾಲ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಚಂದ್ರ ಮೆಡಿಕಲ್ ಮುಂಭಾಗ ಸೋಮವಾರ ಸುಮಾರು 50ರಿಂದ 55 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ವಿಪರೀತ ಮದ್ಯ ಸೇವಿಸಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಎಂದಿನಂತೆ ಮೆಡಿಕಲ್ ಬಾಗಿಲು ತೆಗೆಯಲು ಬಂದ ಸುನೀಲ್ ಎಂಬುವರು ವ್ಯಕ್ತಿಯೊಬ್ಬ ಮೃತಪಟ್ಟಿರುವುದನ್ನು ಗಮನಿಸಿದ್ದಾರೆ. ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಮಹಜರ್ ನಡೆಸಿ ಶವವನ್ನು ಚಾಮರಾಜನಗರ ಮೆಡಿಕಲ್ ಕಾಲೇಜು ಶವಾಗಾರಕ್ಕೆ ರವಾನಿಸಿದ್ದಾರೆ. ಮೃತನ ಬಲಗಡೆ ಕೈಮೇಲೆ ರತ್ನ ಎಂದು ಹಚ್ಚೆ ಇದೆ. ಮೈಮೇಲೆ ಹಸಿರು ಬಣ್ಣದ ಅರ್ಧತೋಳಿನ ಶರ್ಟ್, ನೀಲಿ ಬನಿಯನ್, ಪರ್ಪಲ್ ಬಣ್ಣದ ಕೆಂಪು ಗೆರೆಗಳ ಪ್ಯಾಂಟ್ ಧರಿಸಿದ್ದಾನೆ. ಕೋಲು ಮುಖ, ಎಣ್ಣೆಗೆಂಪ್ಪು ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾನೆ.

ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದಲ್ಲಿ ಪಟ್ಟಣ ಪೊಲೀಸ್ ಠಾಣೆಯ 08224-252368ಗೆ ಗೆ ಕರೆ ಮಾಡುವಂತೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net