ರೈಲ್ವೆ ನಿಲ್ದಾಣದ ಪಕ್ಕದಲ್ಲೇ ಅಪರಿಚಿತ ಶವ ಪತ್ತೆ: ವಾರಸುದಾರರಿದ್ದರೆ ಪೊಲೀಸರನ್ನು ಸಂಪರ್ಕಿಸಿ

Crime Logo
Published on

ಮಂಡ್ಯ: ಮದ್ದೂರು ಪಟ್ಟಣದ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರ್ಮ್ ಸಮೀಪ ಬುಧವಾರ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ಸುಮಾರು 50 ರಿಂದ 55 ವರ್ಷದವನಾಗಿದ್ದು, 5.3 ಅಡಿ ಎತ್ತರ ಹಾಗೂ ಗೋಧಿ ಮೈಬಣ್ಣ ಹೊಂದಿದ್ದಾರೆ. ಮೃತನ ಮೈಮೇಲೆ ಕಪ್ಪು ಕೆಂಪು ಮಿಶ್ರಿತ ಚೆಕ್ಸ್ ಇರುವ ಅಂಗಿ, ಬೂದು ಬಣ್ಣದ ಫ್ಯಾಂಟ್, ಕಪ್ಪು ಬಣ್ಣದ ತುಂಬುತೋಳಿನ ಜರ್ಕಿನ್ ಇದೆ. ಶವವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿಡಲಾಗಿದ್ದು, ವಾರಸುದಾರರಿದ್ದರೆ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net