

ಪುತ್ತೂರು ಗ್ರಾಮಾಂತರ: ಕರ್ನಾಟಕ-ಕೇರಳ ಗಡಿ ಪ್ರದೇಶವಾದ ನೆಟ್ಟಣಿಗೆ ಮುಡ್ನೂರು ಗ್ರಾಮದ ಗಾಳಿಮುಖ ಎಂಬಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವದ ಗುರುತನ್ನು ಸಂಪ್ಯ ಪೊಲೀಸರು ಪತ್ತೆಮಾಡಿದ್ದು, ಕೇರಳದ ಇಡುಕ್ಕಿ ಜಿಲ್ಲೆಯ ಪಣಂಕುಟ್ಟಿ ಸಮೀಪದ ಕುನಟಪುರತ್ ನಿವಾಸಿ ವಿಜಯನ್ ಯಾನೆ ವಿಲ್ಸನ್ (65) ಎಂಬುದು ಬೆಳಕಿಗೆ ಬಂದಿದೆ. ಗಾಳಿಮುಖದಲ್ಲಿರುವ ವೈನ್‌ಶಾಪ್ ಒಂದರ ಹಿಂಬದಿಯ ಗುಡ್ಡದಲ್ಲಿ ಅಪರಿಚಿತನ ಮೃತದೇಹ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದ್ದು, ಶವ ಕೊಳೆತು ದುರ್ನಾತ ಬೀರುತಿತ್ತು. ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಸಂಪ್ಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ತನಿಖೆ ನಡೆಸಿದ್ದು, ಮಾಹಿತಿ ಕಲೆ ಹಾಕಿದ್ದರು.