

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ನೇತೃತ್ವದಲ್ಲಿ ಬುಧುವಾರ ವಿವಿಯ ಕುವೆಂಪು ಸಭಾಂಗಣದಲ್ಲಿ ಜರುಗಿದ ಪಂಡಿತ ದೀನದಯಾಳ ಉಪಾಧ್ಯಾಯರವರ ೧೦೮ನೇ ಜನ್ಮದಿನ ಕಾರ್ಯಕ್ರಮ ಜರುಗಿತು.
ಚಲನಚಿತ್ರ ಕಲಾವಿದರಾದ ಕ. ಸುಚೇಂದ್ರ ಪ್ರಸಾದ ಮಾತನಾಡಿ, ಮನುಷ್ಯ ಬದುಕಿದಾಗ ಕಲಿಯಲೇಬೇಕಾದ ವಿಷಯವನ್ನು ಪ್ರಸ್ತಾಪಿಸುತ್ತಾ ವ್ಯಕ್ತಿ ನಾಡಿಗೆ ಅರ್ಪಿಸಿ ಹೋಗುವುದಲ್ಲ ಸರ್ಮಪಿಸಿ ಹೋಗಬೇಕು ವಿಕೃತಿ ಅಲ್ಲದ್ದು ಸಂಸ್ಕೃತಿಯಾಗಿರುತ್ತದೆ. ಅಂತಹ ನಡತೆಯನ್ನು ನಾವು ಬೆಳಸಿಕೊಳ್ಳಬೇಕು ಮತ್ತು ಅವುಗಳನ್ನು ವಿಚಾರ ಆಚಾರದಲ್ಲಿ ಅಡಗಿಸಿಕೊಳ್ಳಬೇಕು. ಮಾಡುವ ಕೆಲಸ ನಿನ್ನೆ ಇಂದು ನಾಳೆಗೆ ಸಿಮೀತವಾದರೆ ನೆಮ್ಮದಿಯಿಂದ ಇರಬಹುದು, ಅಧ್ಯಯನ ಇಲ್ಲದ ಅಧ್ಯಾಪನಾ ವ್ಯರ್ಥ ಎಂಬ ಮಾತುಗಳನ್ನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳು ಪ್ರೊ. ಸಿ. ಎಮ್. ತ್ಯಾಗರಾಜ ಮಾತನಾಡಿ, ಪಂಡಿತ ದೀನದಯಾಳ ಉಪಾದ್ಯಾಯರವರ ಜೀವನ ಬಗ್ಗೆ ತಿಳಿಸಿದರು ದೇಶದ ಎಲ್ಲಾ ಪ್ರಾಧ್ಯಾಪಕ ಚಿಂತÀಕರ ಆಸೆ ಯುವ ಶಕ್ತಿಗೆ ಆರ್ಥಿಕ ಶಕ್ತಿಯನ್ನು ನೀಡುವ ಪ್ರಯತ್ನ ನಡೆಯಬೇಕು. ಶಿಕ್ಷಣ ಮಾನವತೆಯ ನಿರ್ಮಾಣದೊಂದಿಗೆ ಬದುಕನ್ನು ಸೃಷ್ಟಿಸುವ ಶಕ್ತಿಯಾಗಬೇಕು. ಶಿಕ್ಷಣ ಸರ್ವರ ಪಾಲಿನ ಭಾಗ್ಯವಾಗಬೇಕು ಸರ್ವರಿಗೂ ಭಾಗ್ಯದ ಬಾಗಿಲನ್ನು ತೆರೆಯಬೇಕು. ನಿತ್ಯವು ಒಳ್ಳೆಯದನ್ನೆ ಸ್ವೀಕರಿಸುವ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು. ಸಮಾಜದಲ್ಲಿ ಹೆಣ್ಣನ್ನು ಗೌರವಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರು ಸಂತೋಷ ಕಾಮಗೌಡ ಅವರು ಕಾರ್ಯಕ್ರಮದಲ್ಲಿ ಅತಿಥಿಗಳ ನುಡಿಯನ್ನಾಡಿ ಪ್ರಸ್ತುತ ದಿನಮಾನದಲ್ಲಿ ಪಂಡಿತ ದೀನದಯಾಳ ಉಪಾದ್ಯಾಯರವರ ಉಪದೇಶ ಮತ್ತು ವಿಚಾರಗಳನ್ನು ಅಳವಡಿಸಿಕೊಂಡು ಏಕಾತ್ಮ ಮಾನವ ದರ್ಶನ ಮತ್ತು ಆತ್ಮ ನಿರ್ಭರ ಭಾರತದಂತಹ ವಿಷಯಗಳ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿತೀಶ ಡಂಬಳ ಅವರು ಬರೆದ “ಭಾರತವ ಬೆಳಗಿದ ತೇಜಸ್ಸು” ಪಂಡಿತ ದೀನದಯಾಳ ಉಪಾಧ್ಯಾಯ ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಖ್ಯಾತ ಕಿರುತೆರೆ ನಟರಾದ ಅನಂತ ದೇಶಪಾಂಡೆ ಅವರು ದ. ರಾ. ಬೇಂದ್ರೆ ದರ್ಶನ ಕುರಿತು ಸಂಪೂರ್ಣ ವಿಚಾರ ಕೃತಿ ಮತ್ತು ಭಾವಗೀತೆಗಳ ಪ್ರದರ್ಶನ ನೀಡಿದರು. ಖ್ಯಾತ ಚಲನಚಿತ್ರ ಕಲಾವಿದರಾದ ಕ. ಸುಚೇಂದ್ರ ಪ್ರಸಾದ ಅವರೊಂದಿಗೆ ಉನ್ನತ ಶಿಕ್ಷಣದ ಆಶಯಗಳು ಕುರಿತು ವಿಶ್ವವಿದ್ಯಾಲಯದ ಪ್ರಾದ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಕೆ.ಎಲ್.ಇ. ಸಂಗೀತ ಶಾಲೆ ಮಕ್ಕಳಿಂದ ಸಂಗೀತ ಕಾರ್ಯಕ್ರಮ ಮಾಡಿದರು. ಕುಮಾರ ಪ್ರವೀಣ ದಾವನೆ ದೇಶ ಭಕ್ತಿಗೀತೆ ಹಾಗೂ ಕೆ. ಎಲ್. ಇ. ಸಂಗೀತ ಶಿಕ್ಷಕರಾದ ಸಂಗೀತಾ ಬಾದಂದೆಕರ್ ಕುಲಕರ್ಣಿ ಅವರು ಪ್ರಾರ್ಥಿಸಿದರು. ಪಂ. ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ಸಂಯೋಜಕ ಪ್ರೊ. ಬಿ. ಎಸ್. ನಾವಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿ ಪರಿಚಯ ಮಾಡಿ ಸ್ವಾಗತಿಸಿದರು ಡಾ.ಶಿವಲಿಂಗಯ್ಯ ಗೋಠೆ ವಂದಿಸಿದರು. ಡಾ. ಗಜಾನನ ನಾಯ್ಕ ನಿರೂಪಿಸಿದರು.
ನಿರ್ದೇಶಕರು
ಪಂ. ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
ಮೊ: ೯೮೪೪೧೭೨೭೩೫