ಫಲ ನೀಡದ ರಾಜೀ ಸಂಧಾನ, ಕಾಂಗ್ರೆಸ್ ಭಿನ್ನಮತ ಮತ್ತಷ್ಟು ಹೆಚ್ಚಳ

4cbp4cbpmla-2.jpg
Published on

ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿನ ಕಾಂಗ್ರೆಸ್ ಭಿನ್ನಮತ ಶಮನಕ್ಕೆ ಸಂಧಾನ ಸೂತ್ರವು ಕೆಲಸ ಮಾಡುತ್ತಿಲ್ಲ. ಎರಡು ಬಣಗಳು ಪೈಪೋಟಿಯಲ್ಲಿ ಪ್ರತ್ಯೇಕತೆಯ ಧೋರಣೆ ಪ್ರದರ್ಶಿಸುತ್ತಿವೆ.
ಹೌದು! ಶಾಸಕ ಪ್ರದಿಪ್ ಈಶ್ವರ್ ಅಯ್ಯರ್ ಇನ್ನು ಭಿನ್ನಮತೀಯ ನಾಯಕರೊಂದಿಗೆ ರಾಜೀ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದಾರೆ. ಮುಂಬರುವ ಚುನಾವಣೆಗೆ ಹೊಸಬರ ಆದ್ಯತೆಯ ತಂತ್ರಗಾರಿಕೆಯ ನೀತಿ ಅನುಸರಿಸುತ್ತಿದ್ದಾರೆ. ಇದಕ್ಕೆ ಮತ್ತಷ್ಟು ಕುಪಿತಗೊಂಡಿರುವವರು ಸರಿಯಾದ ಸಮಯಕ್ಕೆ ಬಲವನ್ನು ತೋರಿಸಲು ಚಿಂತಿಸಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮೊದಲಿನಿಂದಲೂ ವೈಯಕ್ತಿಕ ಪ್ರತಿಷ್ಠೆಯಲ್ಲಿ ನಾಯಕರ ನಡುವೆ ಭಿನ್ನಮತ ಪ್ರದರ್ಶನಗೊಳ್ಳುತ್ತಲೇ ಇದೆ. ಹಿಂದೆ 2013 ರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಆಂಜಿನಪ್ಪಗೆ ಟಿಕೆಟ್ ಕೈ ತಪು$್ಪತ್ತಿದ್ದಂತೆ ಬಣಗಳು ಸೃಷ್ಟಿಯಾದವು. ಚುನಾವಣೆಯಲ್ಲಿ ಗೆದ್ದು ಬೀಗಿದವರು ಹಾಗೂ ಹಿರಿಯ ನಾಯಕರ ಗುಂಪುಗಳು ಬಹಿರಂಗವಾಗಿ ಟೀಕೆಯಲ್ಲಿ ತೊಡಗಿದ್ದವು. ಮತ್ತೆ 2018 ರ ಚುನಾವಣೆಯ ಸಂದರ್ಭದಲ್ಲಿ ಪಕ್ಷಕ್ಕೆ ಬಂಡಾಯ ಕಾಂಗ್ರೆಸ್ ತಲೆ ಕಾಡಿತು. ಕಾಲ ಕಳೆದಂತೆ 2023 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಭಿನ್ನಮತ ಶಮನಗೊಂಡು ಒಗ್ಗಟ್ಟು ಮೂಡಿದ್ದರೂ ಸಹ ಇದೀಗ ಪುನಃ ಹೊಡೆದ ಮನೆಯಾಗಿದೆ.

*ಸಂಧಾನದ ಗಲಾಟೆ
ಬಹಿರಂಗವಾಗಿ ಸ್ವಪಕ್ಷೀಯ ಪಾಳಯದಲ್ಲಿ ಭಿನ್ನಮತದ ಚಟುವಟಿಕೆಯು ತೀವ್ರಗೊಂಡು ಸಂಟನೆಗೆ ಪೆಟ್ಟು ಬೀಳುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಪಕ್ಷದ ವರಿಷ್ಠರು ಸಂಧಾನದ ಮೂಲಕ ಗಲಾಟೆಯನ್ನು ದೂರವಾಗಿಸಲು ಬಯಸಿದ್ದಾರೆ. ಇದಕ್ಕೆ ಶಾಸಕ ಪ್ರದಿಪ್ ಈಶ್ವರ್ ಬಣ ಒಪು$್ಪತ್ತಿಲ್ಲ. ಹಿತಶತ್ರುಗಳು ಬೇಕಾಗಿಲ್ಲ. ಹೊಸಬರ ನಿಷ್ಠಾವಂತ ಪಡೆಯನ್ನು ರಚಿಸಲಾಗುವುದು ಎಂಬುದನ್ನು ಬಹಿರಂಗವಾಗಿ ಹೇಳಲಾಗುತ್ತಿದೆ. ಇತ್ತೀಚೆಗೆ ಖಾಸಗಿ ಹೋಟೆಲ್ನಲ್ಲಿ ನಡೆದ ಚುನಾವಣಾ ಪೂರ್ವ ಸಿದ್ಧತಾ ಸಭೆಯಲ್ಲಿ ಸ್ವತಃಶಾಸಕರು ಸ್ವಪಕ್ಷೀಯ ಭಿನ್ನಮತೀಯರ ವಿರುದ್ಧ ಕಿಡಿಕಾರಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ಸಂಧಾನದ ಸಲಹೆಯನ್ನು ತಿರಸ್ಕರಿಸಲಾಗಿದೆ. ಪಕ್ಷದ ವೇದಿಕೆಯನ್ನು ಬಿಟ್ಟು ಹೊರಗಡೆ ಟೀಕಿಸುವವರಿಗೆ ತಲೆ ಬಾಗುವುದಿಲ್ಲ ಎಂದೇಳಿದ್ದಾರೆ. ಜತೆಗೆ ಪಕ್ಷಕ್ಕೆ ನಿಷ್ಠಾವಂತರಲ್ಲದ, ಹೆಚ್ಚಿನ ಮತವನ್ನು ಸೆಳೆಯದೇ ಕೇವಲ ಆರ್ಭಟಿಸುವ ನಾಯಕರ ಅವಶ್ಯಕತೆಯೂ ಇಲ್ಲ ಎಂಬ ಹೇಳಿಕೆಯಿಂದ ಭಿನ್ನಮತದ ಜಾಲ್ವೆಗೆ ತುಪ್ಪ ಬಿದ್ದಂತಾಗಿದೆ ಎಂದೆಲ್ಲಾ ವಿಶ್ಲೇಷಿಸಲಾಗುತ್ತಿದೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net