ಚಿಕಿತ್ಸೆಗೆ ಸ್ಪಂದಿಸದೆ ಅಪರಿಚಿತ ಸಾವು

Published on

ಮದ್ದೂರು: ಪಟ್ಟಣದ ಚನ್ನೇಗೌಡನದೊಡ್ಡಿ ಬಳಿ ಸಮೀಪದ ಇತ್ತೀಚೆಗೆ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ಪಯುರುಷನೊಬ್ಬ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿದ್ದಾನೆ.

ಕಳೆದ ಮಾ.26 ರಂದು ರಸ್ತೆಯ ಪಕ್ಕ ಅನಾರೋಗ್ಯದಿಂದ ಅಸ್ವಸ್ಥಗೊಂಡಿದ್ದ ಅಪರಿಚಿತನನ್ನು ಸ್ಥಳೀಯರು ಪೊಲೀಸರ ಸಹಕಾರದಿಂದ ಪಟ್ಟಣದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಆತ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಶವವನ್ನು ಮಂಡ್ಯ ಜಿಲ್ಲಾಸ್ಪತ್ರೆ ಶೈತ್ಯಾಗಾರದಲ್ಲಿ ಇರಿಸಲಾಗಿದೆ.

ಮೃತನ ಚಹರೆ ಇಂದಿದ್ದು, 5.5 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು ಹೊಟ್ಟೆಯಲ್ಲಿ ಹೊಟ್ಟೆ ಮೇಲ್ಭಾಗದಲ್ಲಿ ಹಳೇ ಗಾಯದ ಗುರುತು ಇದೆ. ವಾರಸುದಾರರು ಇದ್ದಲ್ಲಿ ದೂ: 08232-232170/468245, ಮದ್ದೂರು ಪೊಲೀಸ್ ಠಾಣೆ ಸಿಪಿಐ ಮೊ: 9480804869/08232-224888 ಸಂಪರ್ಕಿಸಬಹುದು ಎಂದು ಪ್ರಕಟಣೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net