ಶ್ರವಣಬೆಳಗೊಳ: ಭಾರತ ಪ್ರವಾಸದಲ್ಲಿರುವ ಯುನೆಸ್ಕೋದ ನಿರ್ದೇಶಕ ಡಾ.ಲೆಜಾರೆ ಲೆಲೊಂಡೊ ಅಸೊಮೊ ಹಾಗೂ ಉಪ ನಿರ್ದೇಶಕಿ ಡಾ.ಜ್ಯೋತಿ ವಸಾಗ್ರಹರ್ ಹಾಗೂ ಕೇಂದ್ರ ಪುರಾತತ್ವ ಇಲಾಖೆ ಅಧೀಕ್ಷಕ ಬಿಪಿನ್ ಚಂದ್ರ ಗುರುವಾರ ಶ್ರವಣಬೆಳಗೊಳಕ್ಕೆ ಭೇಟಿ ನೀಡಿ ವಿಂಧ್ಯಗಿರಿ ಬೆಟ್ಟದ ಬಾಹುಬಲಿ ಮೂರ್ತಿಯನ್ನು ವೀಕ್ಷಣೆ ಮಾಡಿದರು.
ಶ್ರೀ ಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ವತಿಯಿಂದ ಅವರನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ದಿಗಂಬರ ಜೈನ ಸಮಾಜದ ಅಧ್ಯಕ್ಷ ಜಿ.ಪಿ.ಪದ್ಮಕುಮಾರ್, ಕೂಷ್ಮಂಡಿನಿ ಮಹಿಳಾ ಸಮಾಜದ ಅಧ್ಯಕ್ಷೆ ಮಹಾಲಕ್ಷ್ಮೀ ಪ್ರಮೋದ್, ಶ್ರೀಮಠ ಆಡಳಿತ ಮಂಡಳಿಯ ಕಾರ್ಯದರ್ಶಿ ಎಸ್.ಪಿ.ಮಹೇಶ್ ಹಾಗೂ ಸಿಬ್ಬಂದಿ ಇದ್ದರು.