ನಿರುದ್ಯೋಗ, ನೀರಾವರಿಗೆ ಪ್ರಮುಖ ಆದ್ಯತೆ

web2
ಉಗರಗೋಳದ ಶಿವಪ್ಪಯ್ಯ ಶಿವಯೋಗಿಗಳ ಮಠದಲ್ಲಿ ಗಜಾನನ ಮಿತ್ರ ಮಂಡಳಿ ವತಿಯಿಂದ ಶಾಸಕ ವಿಶ್ವಾಸ ವೈದ್ಯ ಅವರನ್ನು ಸತ್ಕರಿಸಲಾಯಿತು. ಎಂ.ಆರ್. ಹಿರೇಮಠ, ಮಂಜುನಾಥ ಕಾಳಪ್ಪನವರ, ಸಿದ್ದು ಗೂಡ್ರಾಶಿ ಇತರರಿದ್ದರು.
Published on

ಉಗರಗೋಳ: ಉಗರಗೋಳದ ಶ್ರೀ ರೇಣುಕಾ (ಯಲ್ಲಮ್ಮ) ದೇವಿ ಅನುದಾನಿತ ಪ್ರೌಢಶಾಲೆಯನ್ನು ಉನ್ನತೀಕರಿಸಿ, ಪಿಯು ಕಾಲೇಜು ಆರಂಭಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ವಿಶ್ವಾಸ ವೈದ್ಯ ಭರವಸೆ ನೀಡಿದರು.

ಗ್ರಾಮದ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಮಠದಲ್ಲಿ ಗಜಾನನ ಮಿತ್ರ ಮಂಡಳಿ ಸೋಮವಾರ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ಕೃಷಿ ಭೂಮಿಗೆ ನೀರಾವರಿ ಸೌಕರ್ಯ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡುತ್ತೇನೆ. ಸಮಸ್ಯೆಗಳನ್ನು ಗಮನಕ್ಕೆ ತಂದಲ್ಲಿ ಈಡೇರಿಸಲು ಕ್ರಮ ವಹಿಸುತ್ತೇನೆ ಎಂದರು.

ನಿವೃತ್ತ ಕೆಎಎಸ್ ಅಧಿಕಾರಿ ಎಂ.ಆರ್.ಹಿರೇಮಠ ಮಾತನಾಡಿ, ರೈತರ ಕಲ್ಯಾಣಕ್ಕಾಗಿ ಏತ ನೀರಾವರಿ ಯೋಜನೆ, ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಒದಗಿಸಲು 110 ಕೆ.ವಿ. ಸಾಮರ್ಥ್ಯದ ವಿದ್ಯುತ್ ವಿತರಣೆ ಕೇಂದ್ರ ಮಂಜೂರು ಮಾಡಬೇಕು ಎಂದರು.

ಗ್ರಾಪಂ ಅಧ್ಯಕ್ಷ ಮಂಜುನಾಥ ಕಾಳಪ್ಪನವರ, ಸಿದ್ದು ಗೂಡ್ರಾಶಿ, ಶರ್ೀ ಬಾರಿಗಿಡದ, ನಿಂಗನಗೌಡ ಹರಳಕಟ್ಟಿ, ಮಲ್ಲು ಜಕಾತಿ, ರಾಜು ಅಂಗಡಿ, ಮಾರುತಿ ಶಿಂಧೆ, ಪ್ರಹ್ಲಾದ ಕೆಳಗಡೆ, ಪರಸಪ್ಪ ಇಮ್ರಾಪುರ, ಮಂಜುಳಾ ಕಾಳಿಂಗೌಡ್ರ, ಸಂಗವ್ವ ಹಿರೇಮಠ, ಗುರಯ್ಯ ಶಿವಪ್ಪಯ್ಯನಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net