

ಕುಂದಾಪುರ: ಶಿಕ್ಷಣ ಕ್ಷೇತ್ರದಲ್ಲಿ ಇಂದು ತೀವ್ರ ಬದಲಾವಣೆಗಳಾಗುತ್ತಿವೆ. ಶಿಕ್ಷಣ ಒಂದು ಆಸ್ತಿ ಎಂಬ ತಿಳಿವಳಿಕೆ ಎಲ್ಲರಿಗೂ ಮೂಡಿದೆ. ಆದರೆ ಕೃತಕ ಬುದ್ಧಿಮತ್ತೆ ಬಳಕೆಯ ಸಾಧಕ ಬಾಧಕಗಳ ಬಗ್ಗೆ ಅರಿವು ಮೂಡಬೇಕಾಗಿದೆ. ಭಾರತ ದೇಶದಲ್ಲಿ ಕೃತಕ ಬುದ್ಧಿ ಮತ್ತೆಯಿಂದಾಗಿ ಯುವಜನರು ನಿರುದ್ಯೋಗಿಗಳಾದರೆ, ದೇಶದ ಭವಿಷ್ಯಅಪಾಯಕಾರಿಯಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಕೆ.ವೆಂಕಟಕೃಷ್ಣ ಐತಾಳ್ ಹೇಳಿದರು.
ಕೋಟೇಶ್ವರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ವಾತನಾಡಿದರು.
ವಲಯಾಧ್ಯಕ್ಷ ಬಿ.ವಾದಿರಾಜ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ವಿಪ್ರವಾಣಿ ಪ್ರಧಾನ ಸಂಪಾದಕ ಪ್ರೊ.ಶಂಕರ ರಾವ್ ಕಾಳಾವರ, ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್ ಶುಭಾಶಂಸನೆಗೈದರು. ಜಿಲ್ಲಾ ಬ್ರಾಹ್ಮಣ ಪರಿಷತ್‌ನ ಗಣೆೇಶ್ ರಾವ್, ಶಾಂತಾ ಗಣೆೇಶ್, ವಲಯದ ಪೂರ್ವಾಧ್ಯಕ್ಷ, ಬ್ರಹ್ಮಾವರ ತಾಲೂಕು ವೈದ್ಯಾಧಿಕಾರಿ ಡಾ.ಮಹೇಶ್ ಐತಾಳ್ ದಂಪತಿ, ಅಭಿರಾಮ್ ಉಪಸ್ಥಿತರಿದ್ದರು.
ಮಹಿಳಾ ವೇದಿಕೆ ಕಾರ್ಯದರ್ಶಿ ನಾಗರತ್ನಾ ಉಡುಪ ಪ್ರಾರ್ಥಿಸಿದರು. ವಲಯ ಕಾರ್ಯದರ್ಶಿ ನಾಗೇಂದ್ರ ಸ್ವಾಗತಿಸಿದರು. ಅರ್ಚಕ ವೈ.ಎನ್.ವೆಂಕಟೇಶಮೂರ್ತಿ ಭಟ್ ಸನ್ಮಾನ ಪತ್ರ ವಾಚಿಸಿದರು. ಕೆ.ಜಿ.ವೈದ್ಯ ಕಾರ್ಯಕ್ರಮ ನಿರೂಪಿಸಿದರು. ಗೌರವಾಧ್ಯಕ್ಷ ಗಣಪಯ್ಯ ಚಡಗ ವಂದಿಸಿದರು.