

ಹಾವೇರಿ: ವಿಚಾರಧೀನ ಮಹಿಳಾ ಕೈದಿ ಎದೆನೋವಿನಿಂದ ಮೃತಪಟ್ಟ ಘಟನೆ ನಗರದ ಜಿಲ್ಲಾ ಕಾರ್ಯಾಗೃಹದಲ್ಲಿ ನಡೆದಿದೆ.
ಹಾನಗಲ್ಲ ತಾಲೂಕಿನ ಕೊಪ್ಪಸಿರ್ಕೊಪ್ಪ ಗ್ರಾಮದ ಪುಷ್ಪ ಬಸವರಾಜ ಓಲೇಕಾರ (35) ಮೃತ ಮಹಿಳೆ.
ಇವಳನ್ನು ವಿವಿಧ ಅಪರಾಧ ಪ್ರಕರಣದಲ್ಲಿ ಬಂಧಿಸಿ 2024 ಡಿಸೆಂಬರ್ 27ರಂದು ಜಿಲ್ಲಾ ಕಾರ್ಯಾಗೃಹದಲ್ಲಿಡಲಾಗಿತ್ತು. ಭಾನುವಾರ ಎದೆನೋವು ಕಾಣಿಸಿಕೊಂಡಿದ್ದರಿಂದ ಕೂಡಲೇ ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.