ಅರ್ಥವಾಗುವಂತೆ ಬೋಧನೆ ಮಾಡಲಿ

8Ckd2
Published on

ಚಿಕ್ಕೋಡಿ: ಶಿಕ್ಷಕರ ಕಾರ್ಯಕ್ಕೆ ಸಮನಾಗಿ ಕೆಲಸ ಮಾಡುವ ತಂತ್ರಜ್ಞಾನ ಇಲ್ಲ ಎಂದು ಜೊಲ್ಲೆ ಗ್ರೂಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಹೇಳಿದರು.

ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಎಜುಕೇಷನ್ ಸೊಸೈಟಿಯ ವಿವಿಧ ಅಂಗ ಸಂಸ್ಥೆಗಳ ಸಿಬ್ಬಂದಿ ವರ್ಗಕ್ಕೆ ವೃತ್ತಿ ಬೆಳವಣಿಗೆಯ ಕುರಿತು ಈಚೆಗೆ ಹಮ್ಮಿಕೊಂಡಿದ್ದ 2 ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಶಿಕ್ಷಕರಿಗಾಗಿ ಕಾರ್ಯಾಗಾರ ಆಯೋಜಿಸುವ ಮೂಲಕ ಅವರಲ್ಲಿ ಜ್ಞಾನ, ಕೌಶಲ ಮತ್ತು ಪರಿಣಾಮಕಾರಿ ಕಲಿಕಾ ಬೋಧನಾ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಮಕ್ಕಳಿಗೆ ಅರ್ಥವಾಗುವಂತೆ ಪಾಠ ಹೇಳಬೇಕು ಎಂದರು.

ಬೆಳಗಾವಿ ಡಯಟ್ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ನಾಗರಾಜ ಕಾಳೆ ಹಾಗೂ ಬೆಂಗಳೂರಿನ ಟ್ರಂಪ್ ಸಿಬಿಎಸ್‌ಇ ಸ್ಕೂಲ್ ಪ್ರಾಚಾರ್ಯ ಡಾ.ಮಹೇಶ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಇಂತಹ ಸಂಸ್ಥೆ ಹುಟ್ಟುಹಾಕಿ ಪಟ್ಟಣಾಧಾರಿತ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಷಯ. ಶಿಕ್ಷಕರು ಪರಿಣಾಮಕಾರಿ ಬೋಧನೆ ಮಾಡುವ ಜತೆಗೆ ಮಕ್ಕಳೊಂದಿಗೆ ಹೇಗೆ ಸಂಬಂಧ ಬೆಳೆಸಿಕೊಳ್ಳಬೇಕು ಎಂಬುವುದನ್ನು ತಿಳಿಸಿಕೊಡಲು ಇಂತಹ ಕಾರ್ಯಾಗಾರ ಅವಶ್ಯ ಎಂದು ತಿಳಿಸಿದರು.

ಸಂಸ್ಥೆಯ ಸಂಯೋಜಕ ಎಂ.ಎಂ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾಜ್ಯೋತಿ ವಿಶೇಷ ಮಕ್ಕಳ ವಸತಿ ಶಾಲೆ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯರಾದ ರವಿ ಕುರಬೇಟ, ಉರ್ಮಿಳಾ ಚೌಗಲಾ, ನಂದಾ ಚುನಮುರಿ, ಗುರುನಾಥ ಸದಲಗೆ, ಸಿ.ಪಿ.ಬನ್ನಟ್ಟಿ, ಮುಖ್ಯಶಿಕ್ಷಕ ವಿರೂಪಾಕ್ಷಿ ಭಿವಸೆ, ವಿಜಯ ನಾಯಿಕ ಹಾಗೂ ವಿದ್ಯಾರ್ಥಿಗಳು ಇದ್ದರು. ವರ್ಷಾ ಉಪಾಧ್ಯೆ ಸ್ವಾಗತಿಸಿದರು. ಪ್ರಿಯಾಂಕಾ ದೇಸಾಯಿ ನಿರೂಪಿಸಿದರು. ಪೂನಮ ಪರೀಟ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net