ರೈತರ ಸಂಕಷ್ಟ ಅರಿತು, ಸ್ಪಂದಿಸಿ

Understand the plight of farmers and respond
ಇಂಗಳಗಿ ಗ್ರಾಮದಲ್ಲಿ ಕೃಷಿ ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರವನ್ನು ಡಾ. ಎ. ಭೀಮಪ್ಪ ಉದ್ಘಾಟಿಸಿದರು. ರವೀಂದ್ರ ಬೆಳ್ಳಿ, ಲಕ್ಷಿ$್ಮಬಾಯಿ ದಶವಂತ, ಡಾ. ಆರ್​.ಬಿ. ಜೊಳಿ ಮತ್ತಿತರರಿದ್ದಾರೆ.
Published on

ವಿಜಯಪುರ: ರೈತ ಈ ದೇಶದ ಬೆನ್ನೆಲುಬು. ಆತನ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಕಾರಣ ರೈತರೊಂದಿಗೆ ಬೆರೆತು ಅವರ ಕಷ್ಟಗಳಿಗೆ ಸ್ಪಂದಿಸುವುದರ ಜತೆಗೆ ಅಗತ್ಯ ಸಲಹೆ ಸಹಕಾರ ನೀಡಬೇಕು ಎಂದು ಡೀನ್​ ಡಾ. ಎ. ಭೀಮಪ್ಪ ಹೇಳಿದರು.

ಇಂಡಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಶುಕ್ರವಾರ ವಿಜಯಪುರ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಂದ ನಡೆದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ 12 ವಾರಗಳ ಅವಧಿಯಲ್ಲಿ ವಿವಿಧ ಗ್ರಾಮಗಳ ರೈತರ ೇತ್ರಗಳಿಗೆ ಭೇಟಿ ನೀಡಿ, ಅವರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬೇಕು. ರೈತರ ಸಮಸ್ಯೆಗಳನ್ನು ಅರಿತು ಅದರ ಆಧಾರದ ಮೇಲೆ ವಿವಿಧ ಪ್ರಾಧ್ಯಾಪಕರ ಸಲಹೆ ಪಡೆದುಕೊಂಡರೆ ಪರಿಪೂರ್ಣ ಪದವೀಧರರಾಗಿ ಹೊರಹೊಮ್ಮುವರು ಎಂದರು.

ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಶಿಬಿರದಲ್ಲಿ ವಿದ್ಯಾರ್ಥಿಗಳು ತಮ್ಮ ಅವಧಿಯಲ್ಲಿ ವಿವಿಧ ತರ ಸಲಹೆ ಪಡೆದು ರೈತರಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

ಕೀಟ ವಿಭಾಗ ಪ್ರಾಧ್ಯಾಪಕ ಡಾ. ಎ.ಪಿ. ಬಿರಾದಾರ ಮತ್ತು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಶಿವಶಂಕರಮೂರ್ತಿ ಅವರು ತೊಗರಿ, ಹತ್ತಿ ಮತ್ತು ಕಬ್ಬು ಬೆಳೆಯ ಬೇಸಾಯ ಕ್ರಮ ಮತ್ತು ಬೆಳೆಗೆ ತಗಲುವ ವಿವಿಧ ಕೀಟ ಮತ್ತು ರೋಗಗಳ ಕುರಿತ ಉಪನ್ಯಾಸ ನೀಡಿದರು.

ಇಂಡಿ ಸಹಾಯಕ ಕೃಷಿ ನಿರ್ದೇಶಕ ಡಾ. ಮಹಾದೇವಪ್ಪ ಏವೂರ ಮಾತನಾಡಿ, ರೈತರಿಗೆ ಮಣ್ಣು ಪರೀೆ ಮಹತ್ವ ತಿಳಿಸಿ, ಆಯ್ದ ರೈತರಿಗೆ ಮಣ್ಣು ಪರೀೆ ಕಾರ್ಡ್​ ವಿತರಿಸಿದರು.

ಶಿಬಿರದ ಸಂಯೋಜಕ ಡಾ. ಆರ್​.ಬಿ. ಜೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಗಳಗಿ ಗ್ರಾಪಂ ಅಧ್ಯಕ್ಷೆ ಲಕ್ಷಿ$್ಮಬಾಯಿ ದಶವಂತ ಅಧ್ಯಕ್ಷತೆ ವಹಿಸಿದ್ದರು.

ಆಯೋಜಕಿ ಡಾ. ವಿದ್ಯಾವತಿ ಯಡಹಳ್ಳಿ, ಪೂಜಾ ತೇರದಾಳ, ಗ್ರಾಪಂ ಉಪಾಧ್ಯಕ್ಷ ಅಜೀತ ಕದಂಬ, ಕೃಷಿ ಅಧಿಕಾರಿ ಮಹಾಂತೇಶ ಶೆಟ್ಟನ್ನವರ, ಪ್ರಗತಿಪರ ರೈತರಾದ ರಾವೇಂದ್ರ ಕುಲಕರ್ಣಿ, ಮಲ್ಲಿಕಾರ್ಜುನ ವಾಲಿಕಾರ, ಅನೀಲಕುಮಾರ ಚವಾಣ, ರೈತರು ಮತ್ತಿತರರಿದ್ದರು.

ವಿದ್ಯಾರ್ಥಿನಿ ಪ್ರತಿಭಾ ಪ್ರಾರ್ಥಿಸಿದರು. ಸಹನಾ ಜಿ. ಸ್ವಾಗತಿಸಿದರು. ಸ್ಪೂರ್ತಿ ನಿರೂಪಿಸಿದರು. ಸಾನಿಯಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net