ಅರೆಭಾಷೆಯ ಆಚಾರ, ವಿಚಾರ ಅರಿತುಕೊಳ್ಳಿ

arebhashe
Published on

ಮಡಿಕೇರಿ: ಮಡಿಕೇರಿ: ಅರೆಭಾಷೆ ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರ ಮತ್ತು ಸಂಪ್ರದಾಯದ ಕುರಿತು ಸಮಾಜದ ಬಂಧುಗಳು ಅರಿತುಕೊಳ್ಳಬೇಕು ಎಂದು ಅರೆಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯ ಹಾಗೂ ವಿದ್ಯಾ ಸಂಘದ ನಿರ್ದೇಶಕ ಸೂದನ ಎಸ್.ಈರಪ್ಪ ಹೇಳಿದರು.

ಕರ್ನಾಟಕ ಅರೆಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ಮಡಿಕೇರಿಯ ಕೊಡಗು ಗೌಡ ಸಮಾಜದ ಮೇಲಿನ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅರೆಭಾಷೆ ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರ ಮತ್ತು ಸಂಪ್ರದಾಯದ ಕುರಿತು ಅರಿತುಕೊಳ್ಳಬೇಕು. ಈ ರೀತಿಯ ಸ್ಪರ್ಧೆಗಳಲ್ಲಿ ಹೆಚ್ಚು ಹೆಚ್ಚು ಮಕ್ಕಳು ಪಾಲ್ಗೊಳ್ಳಬೇಕು. ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಲು ಮತ್ತು ಅರೆಭಾಷೆ ಐನ್‌ಮನೆ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲು ಅರೆಭಾಷೆ ಅಕಾಡೆಮಿ ಸದಾ ಸಿದ್ಧವಿದೆ ಎಂದು ತಿಳಿಸಿದರು.

ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ನವೀನ್ ಅಂಬೆಕಲ್ಲು ಮಾತನಾಡಿ, ವಿದ್ಯಾ ಸಂಘದ ಕಟ್ಟಡದ ನವೀಕರಣ ಕಾರ್ಯ ನಡೆಯುತ್ತಿದ್ದರೂ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕೆನ್ನುವ ಉದ್ದೇಶದಿಂದ ಅರೆಭಾಷೆ ಅಕಾಡೆಮಿಯ ಸಹಕಾರದೊಂದಿಗೆ ಸ್ಪರ್ಧಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದೇವೆ ಎಂದರು.

ವಿದ್ಯಾ ಸಂಘದ ಉಪಾಧ್ಯಕ್ಷ ಅಮೆ ಸೀತಾರಾಮ್, ಕಾರ್ಯದರ್ಶಿ ಪೇರಿಯನ ಉದಯ, ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷರು ಹಾಗೂ ವಿದ್ಯಾ ಸಂಘದ ನಿರ್ದೇಶಕ ಚೊಕ್ಕಾಡಿ ಅಪ್ಪಯ್ಯ, ಜಂಟಿ ಕಾರ್ಯದರ್ಶಿ ತಳೂರು ದಿನೇಶ್ ಖಜಾಂಜಿ ಕಾಳೇರಮ್ಮನ ಲತಾ ನಂದಕುಮಾರ್ ಮತ್ತು ಸರ್ವ ನಿರ್ದೇಶಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಿರಿಯರಾದ ಚೊಕ್ಕಾಡಿ ಪ್ರೇಮ ರಾಘವಯ್ಯ ಪ್ರಾರ್ಥಿಸಿದರು.

ಸ್ಪರ್ಧಾ ವಿಜೇತರು: ೧ರಿಂದ ೪ನೇ ತರಗತಿವರೆಗೆ ನಡೆದ ಅರೆಭಾಷೆ ಸಾಂಪ್ರದಾಯಿಕ ಉಡುಗೆ ಸ್ಪರ್ಧೆಯಲ್ಲಿ ಕೂಡಕಂಡಿ ಸನ್ನಿಧಿ(ಪ್ರ), ಪೈಕೇರ ಲೋಚನ್ ಮಾದಪ್ಪ(ದ್ವಿ), ಇಂಚರ ಮೂಲೆಮಜಲು(ತೃ), ೫ರಿಂದ ೭ನೇ ತರಗತಿವರೆಗೆ ನಡೆದ ಸ್ಪರ್ಧೆಯಲ್ಲಿ ಪೈಕೇರ ಡೀನ್ ಮಾದಪ್ಪ(ಪ್ರ), ಥನ್ವಿ ಪರಿವಾರನ(ದ್ವಿ), ಬಳಪದ ಲಕ್ಷಿತ ತೃತೀಯ ಬಹುಮಾನವನ್ನು ಪಡೆದುಕೊಂಡರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಪದವಿ ಪೂರ್ವ ಹಾಗೂ ಪದವಿ ವಿಭಾಗದಲ್ಲಿ ದಾಯನ ಹೆಲೀನಾ(ಪ್ರ), ಕೊಂಪಳಿರ ಸಿಂಚನ(ದ್ವಿ), ಕುದುಪಜೆ ದಿಶಾ(ತೃ), ಸಾರ್ವಜನಿಕರ ವಿಭಾಗ ಕವನ ಮೂಲೆಮಜಲು(ಪ್ರ), ನಡುಗದ್ದೆ ಜಯಂತಿ ರೋಹಿತ್(ದ್ವಿ), ಪುದಿಯನೆರವನ ಸ್ವಾತಿ ರಿಷಿತ್ ತೃತೀಯ ಬಹುಮಾನವನ್ನು ಪಡೆದುಕೊಂಡರು. ಪ್ರಬಂಧ ಸ್ಪರ್ಧೆಯಲ್ಲಿ ಕೂಡಕಂಡಿ ಅಶ್ವಿತ್ ನಾಗೇಶ್(ಪ್ರ), ಪಟ್ಟಡ ಶಿಲ್ಪ(ದ್ವಿ), ದೇಶ್ಕೋಡಿ ಮಾನ್ಯ ದೇವಿ ಪ್ರಕಾಶ್ ತೃತೀಯ ಬಹುಮಾನವನ್ನು ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net