ಬಿಐಎಸ್-ಸಿಐಐ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ಶೃಂಗಸಭೆ

BIS
Published on

ಬೆಂಗಳೂರು: ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಇಂಟರ್‌ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಸಮಿಟ್ 2024ಕ್ಕೆ ಗುರುವಾರ ಚಾಲನೆ ದೊರೆಯಿತು. ಬ್ಯೂರೋ ಆಫ್ ಇಂಡಿಯನ್ ಸ್ಟಾೃಂಡರ್ಡ್ಸ್ (ಬಿಐಎಸ್) ಮತ್ತು ಇನ್‌ಸ್ಟಿಟ್ಯೂಟ್ ಆಫ್ ಕ್ವಾಲಿಟಿ (ಸಿಐಐ) ಜಂಟಿಯಾಗಿ ಆಯೋಜಿಸಿರುವ ಎರಡು ದಿನಗಳ ಶೃಂಗಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ಇಂಧನ ವಲಯದ ಉತ್ಕೃಷ್ಟತೆ, ಹೊಂದಾಣಿಕೆ ಮತ್ತು ರೂಪಾಂತರದ ಮಹತ್ವದ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಶುದ್ಧ ಇಂಧನ ಬಳಕೆಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ, ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವುದರೊಂದಿಗೆ ಜಗತ್ತು ಸುಸ್ಥಿರ ಭವಿಷ್ಯದತ್ತ ಹೆಜ್ಜೆಹಾಕಲು ಶೃಂಗಸಭೆಯನ್ನು ಆಯೋಜಿಸಿರುವುದಾಗಿ ಸಂಘಟಕರು ತಿಳಿಸಿದರು.

ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ನಿಧಿ ಖರೆ ಮಾತನಾಡಿ, ಸೌರ ಶಕ್ತಿಯ ಬಳಕೆ, ಗ್ರೀನ್ ಹೈಡ್ರೋಜನ್ ಮತ್ತು ಇ-ಮೊಬಿಲಿಟಿಯಂತಹ ಭವಿಷ್ಯದ ಯೋಜನೆಗಳನ್ನು ಭಾರತ ಸರ್ಕಾರ ಪರಿಣಾಮಕಾರಿಯಾಗಿ ಬಳಕೆಗೆ ತರುವ ಉದ್ದೇಶವನ್ನಿರಿಸಿಕೊಂಡಿದ್ದು, ಆ ಮೂಲಕ 2047 ರ ವೇಳೆಗೆ ವಿಕಸಿತ್ ಭಾರತ್ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವ ಕುರಿತು ತಿಳಿಸಿದರು.

ಭಾರತೀಯ ಮಾನದಂಡಗಳ ಬ್ಯೂರೋದ ಮಹಾನಿರ್ದೇಶಕ ಪ್ರಮೋದ್ ಕುಮಾರ್ ತಿವಾರಿ ಮಾತನಾಡಿ, ಭಾರತೀಯ ಮಾನದಂಡಗಳ ಪ್ರಗತಿಗಾಗಿ ಎಲ್ಲಾ ಮಧ್ಯಸ್ಥಗಾರರ ನಡುವೆ ಸಹಯೋಗದ ಅಗತ್ಯವಿದೆ ಎಂದು ಹೇಳಿದರು.

ದಿನಪೂರ್ತಿ ನಡೆದ ಸಭೆಯಲ್ಲಿ ವೋಲ್ವೋ ಸಮೂಹದ ಎಂಡಿ ಕಮಲ್ ಬಾಲಿ, ಗುಣಮಟ್ಟಗಳ ನಿರ್ವಹಣಾ ಮಂಡಳಿಯ ಅಧ್ಯಕ್ಷ ವಿಮಲ್ ಮಹೇಂದ್ರು,ಕಾರ್ಯದರ್ಶಿ ಸೆರ್ಗಿಯೋ ಮುಜಿಕಾ (ವರ್ಚುವಲ್) ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net