

ಚನ್ನಗಿರಿ: ತಾಲೂಕಿನ ಪಾಂಡೋಮಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಿ.ಆರ್. ಗಂಗಮ್ಮ ಲಿಂಗರಾಜ್ ಹಾಗೂ ಉಪಾಧ್ಯಕ್ಷರಾಗಿ ಚನ್ನಬಸಪ್ಪ ಕುಂಬಲೂರು ಅವಿರೋಧವಾಗಿ ಆಯ್ಕೆಯಾದರು.
ಗ್ರಾಮ ಪಂಚಾಯಿತಿಯ 2ನೇ ಅವಧಿಗೆ ಗುರುವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾದವು.
ಹೀಗಾಗಿ ನಾಮಪತರ ಪರಿಶೀಲನೆ ಬಳಿಕ ಅವು ಕ್ರಮಬದ್ಧವಾಗಿದ್ದ ಹಿನ್ನೆಲೆಯಲ್ಲಿ ಹಾಗೂ ಪ್ರತಿಸ್ಫರ್ದಿಗಳಿರದ ಕಾರಣ ಚುನಾವಣಾಧಿಕಾರಿ ಸದಾನಂದ ಅವಿರೋಧ ಆಯ್ಕೆ ಘೋಷಿಸಿದರು.
ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಲೋಕೇಶ್ವರಪ್ಪ ಮಾತನಾಡಿ, ಜನಪ್ರತಿನಿಧಿಗಳ ಬಳಿ ಜನರು ಕಷ್ಟಸುಖ ಹಂಚಿಕೊಳ್ಳಲು ಬಂದಂತ ವೇಳೆ ತಾಳ್ಮೆಯಿಂದ ಇದ್ದು ಅವರ ಕೆಲಸ ಮಾಡಿಕೊಡಬೇಕು. ಎಲ್ಲರೂ ನಮ್ಮವರೇ ಎಂಬ ಭಾವನೆ ಮನಸ್ಸಿನಲ್ಲಿ ಇದ್ದರೆ ಗ್ರಾಮದ ಅಭಿವೃದ್ಧಿ ಸುಲಭ ಎಂದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜಗದೀಶ್ ಮಾತನಾಡಿ, ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ಮಾಡಬೇಕು.ನಂತರ ಒಗ್ಗಟ್ಟಾಗಿ ಅಭಿವೃದ್ಧಿ ಕೆಲಸ ಮಾಡಬೇಕು. ಸರ್ಕಾರ ನೇರವಾಗಿ ಗ್ರಾಪಂಗೆ ಅನುದಾನ ನೀಡುತ್ತದೆ. ಅದರ ಸದ್ಬಳಕೆ ಆಗಬೇಕು ಎಂದು ತಿಳಿಸಿದರು.
ಎಸ್.ಡಿ. ಶಿವಕುಮಾರ್, ಬಿ.ಆರ್. ಚಂದ್ರಮ್ಮ, ಲಕ್ಷ್ಮೀಬಾಯಿ, ಶಿವಮ್ಮ, ಜಯಮ್ಮ, ಎಂ. ದೀಪಾ, ಬಸವರಾಜಪ್ಪ, ಪ್ರಭುಲಿಂಗಪ್ಪ, ಪರಮೇಶ್ವರಪ್ಪ, ಬಸವಲಿಂಗಪ್ಪ, ಉಬ್ರಾಣಿ ಏತ ನೀರಾವರಿ ಅಧ್ಯಕ್ಷ ದೇವರಾಜ್, ಜಿ.ಡಿ. ರವಿ, ಶೈಲೇಶ್ ಪಾಟೀಲ್, ಪಿಡಿಒ ಶಿವಮೂರ್ತಿ ಇದ್ದರು.