ನಿರ್ಮಾಣವಾಗದ ಬ್ರಿಡ್ಜ್, ಹೆದ್ದಾರಿಯಲ್ಲಿ ನಿರಂತರ ಅಪಘಾತ

12cbp4
Published on

ವಿಜಯವಾಣಿ: ಅಪಘಾತ ತಡೆ, ಸುಗಮ ಸಂಚಾರಕ್ಕೆ ಸಾದಲಿ ಕ್ರಾಸ್ ನಲ್ಲಿ ಬ್ರಿಡ್ಜ್ ನಿಮಾರ್ಣ ಬೇಡಿಕೆಯ ಕೂಗಿಗೆ ಸ್ಥಳಿಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಿವಿಗೊಟ್ಟಿಲ್ಲ.

ಕಳೆದ 3 ದಶಕದಿಂದಲೂ ಇಲ್ಲಿ ನಿರಂತರವಾಗಿ ಹೋರಾಟ ನಡೆಸಿ, ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಲಾಗುತ್ತಿದೆ. ಆದರೆ, ಚರ್ಚೆ ಮತ್ತು ಭರವಸೆಗೆ ಮಾತ್ರ ಸೀಮಿತವಾಗಿದ್ದು ಇದರಿಂದ ಸ್ಥಳಿಯರು ತೊಂದರೆ ಅನುಭವಿಸಬೇಕಾಗಿದೆ.

ಸಾದಲಿ ಹೋಬಳಿಯ ಮುಖ್ಯ ರಾಜ್ಯ ಹೆದ್ದಾರಿಯಾಗಿದೆ ಸಾದಲಿ ಕ್ರಾಸ್ ರಸ್ತೆ. ಇಲ್ಲಿ ಬೃಹತ್ ಸರಕು ಮತ್ತು ಪ್ರಯಾಣಿಕರ ಸಾಗಾಣೆಯ ವಾಹನಗಳು ನಿರಂತರವಾಗಿ ಸಂಚರಿಸುತ್ತಿರುತ್ತವೆ. ಸದಾ ದಟ್ಟಣೆ ಇರುತ್ತದೆ. ಇಂತಹ ರಸ್ತೆಯಲ್ಲಿ ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೇತುವೆ ನಿರ್ಮಿಸಬೇಕಾಗಿರುವುದು ಅಗತ್ಯವಿದೆ. ಆದರೆ, ಇಲ್ಲಿ ಸರ್ವೀಸ್ ರಸ್ತೆ ವ್ಯವಸ್ಥೆಯ ಮೂಲಕ ಕೈ ತೊಳೆದುಕೊಂಡಿದ್ದು ಸಮಸ್ಯೆಯು ನಿರಂತರವಾಗಿ ಕಾಡುತ್ತಿದೆ.

*ಅಪಘಾತಗಳ ಹೆಚ್ಚಳ

ಇಲ್ಲಿ ವೇಗ ಸಂಚಾರದ ನಡುವೆ ಸಾದಲಿ ಕ್ರಾಸ್ ಮಾರ್ಗವಾಗಿ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳು ಸಾಗಲು ತೊಂದರೆ ಅನುಭವಿಸಬೇಕಾಗಿದ್ದು ಅಡ್ಡಲಾಗಿ ಬರುವ ವಾಹನಗಳ ನಡುವೆ ಸವಾರರು ಹೆಚ್ಚಿನ ಸಮಯ ಕಾದು ನಿಲ್ಲಬೇಕಾಗಿದೆ. ಸ್ವಲ್ಪ ಯಾಮಾರಿದರೂ ಅಪಘಾತ ಸಂಭವಿಸುತ್ತದೆ. ಈಗಾಗಲೇ ಅನೇಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಗಾಯಾಳುಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೈರಾಣರಾಗಿದ್ದಾರೆ.

ಸಾದಲಿ ಕ್ರಾಸ್ ಮಾರ್ಗದ ರಸ್ತೆಯು ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಮತ್ತು ಶಿಡ್ಲಟ್ಟ ಸೇರಿದಂತೆ 3 ವಿಧಾನಸಭಾ ಕ್ಷೇತ್ರಗಳನ್ನು ಸಂಪರ್ಕಿಸುತ್ತದೆ. ಇದು ರಾಷ್ಟ್ರೀಯ ಹೆದ್ದಾರಿ -44 ಮಾರ್ಗದಲ್ಲಿ ಸೋಮೇಶ್ವರ ಮೂಲಕ ಸಾದಲಿಯಿಂದ ಬಂಗಾರಪೇಟೆಯನ್ನು ಸೇರಿಸುವ ರಸ್ತೆ ಆಗಿದೆ. ಇಲ್ಲಿ ಅವಡಗಳು ಸಂಭವಿಸುವುದಕ್ಕೆ ಕಡಿವಾಣ ಹಾಕಲು ತ್ವರಿತವಾಗಿ ಸೇತುವೆಯನ್ನು ನಿರ್ಮಿಸಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net