24ರಂದು ಅನ್ ಕ್ಲೇಮ್ಡ್ ಠೇವಣಿ ಮೊತ್ತಗಳ ಹಕ್ಕುಪತ್ರ ಶಿಬಿರ

Published on

ಹುಬ್ಬಳ್ಳಿ: ಭಾರತ ಸರ್ಕಾರದ ಹಣಕಾಸು ಸೇವೆಗಳ ಇಲಾಖೆ (ಡಿಎಫ್ಎಸ್) ಮತ್ತು ರಾಜ್ಯ ಮಟ್ಟದ ಬ್ಯಾಂಕರಗಳ ಸಮಿತಿ (ಎಸ್ ಎಲ್ ಬಿಸಿ) ನಿರ್ದೇಶನದಂತೆ ಧಾರವಾಡ ಜಿಲ್ಲೆಯಲ್ಲಿ ಅನ್ ಕ್ಲೇಮ್ಡ್ ಬ್ಯಾಂಕ್ ಠೇವಣಿ ಮೊತ್ತಗಳ ಹಕ್ಕು ಪತ್ರ ಶಿಬಿರವನ್ನು ಅ. 24ರಂದು ಬೆಳಗ್ಗೆ 11ಕ್ಕೆ ವಿದ್ಯಾನಗರದ ಬ್ಯಾಂಕರ್ಸ್ ಭವನದಲ್ಲಿ ಆಯೋಜಿಸಲಾಗಿದೆ.

ಬ್ಯಾಂಕ್ ನಲ್ಲಿ 10 ವರ್ಷಕ್ಕಿಂತ ಹೆಚ್ಚು ಕಾಲ ಬಾಕಿಯಾಗಿರುವ ಖಾತೆ ಮತ್ತು ಠೇವಣಿ ಮೊತ್ತಗಳು ಆರ್ ಬಿಐನ ಡಿಇಎಎಫ್ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಮೊತ್ತಗಳನ್ನು ಗ್ರಾಹಕರ ಅನಾಮಿಕ ಅನ್ ಕ್ಲೇಮ್ಡ್ ಠೇವಣಿ (ಡಿಪಾಸಿಟ್) ಎಂದು ಪರಿಗಣಿಸಲಾಗುತ್ತದೆ. ಈ ರೀತಿಯ ಠೇವಣಿ ಮೊತ್ತಗಳನ್ನು ಹಕ್ಕುಪತ್ರದ ಮೂಲಕ ವಾಪಸ್ ಪಡೆಯಲು ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ.

ಎಲ್ಲ ಬ್ಯಾಂಕ್, ವಿಮಾ ಮತ್ತು ಇತರ ಇಲಾಖಾ ಕಚೇರಿ ಶಾಖೆಗಳಲ್ಲಿ ಡಿ. 31ರ ವರೆಗೆ ಶಿಬಿರ ನಡೆಯಲಿದೆ. ಬ್ಯಾಂಕ್ ಖಾತೆಗಳು, ಬಾಕಿ ಇರುವ ಠೇವಣಿಗಳು, ವಿಮಾ ಮೊತ್ತಗಳು, ಷೇರುಗಳು ಮತ್ತು ಇತರ ಹಣಕಾಸು ಸ್ವತ್ತುಗಳನ್ನು ವಸೂಲಿ ಮಾಡಲು ಜಾಗೃತಿ ಮೂಡಿಸಲಾಗುವುದು ಮತ್ತು ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರಿಗೆ ವಸೂಲಿಗಾಗಿ ಸಹಾಯ ನೀಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net