

ಬೆಳಗಾವಿ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವ ಸಂತ್ರಸ್ತರು ಇದೀಗ ಮನೆಹಾನಿ ಪರಿಹಾರಕ್ಕಾಗಿ ಸಾವಿರಾರು ರೂ. ಖರ್ಚು ಮಾಡುವ ಪರಿಸ್ಥಿತಿ ಎದುರಾಗಿದೆ. ಜತೆಯಲ್ಲೇ ಸ್ಥಳ ಪರಿಶೀಲನೆ ನಡೆಸದೆ ತಹಸೀಲ್ದಾರ್ ಕಚೇರಿಯಲ್ಲಿ ಮನೆಹಾನಿ ವರದಿಯೂ ಸಿದ್ಧವಾಗುತ್ತಿದೆ.
ಚಿಕ್ಕೋಡಿ, ಮೂಡಲಗಿ, ಅಥಣಿ, ಖಾನಾಪುರ, ಹುಕ್ಕೇರಿ, ರಾಯಬಾಗ ಸೇರಿ ವಿವಿಧ ತಾಲೂಕು ವ್ಯಾಪ್ತಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮನೆ ಕಳೆದುಕೊಂಡ ಲಾನುಭವಿಗಳು ಇದೀಗ ಪರಿಹಾರ ಕೈ ತಪ್ಪುವ ಪರಿಸ್ಥಿತಿ ಎದುರಾಗಿದೆ. ಕೆಲವೆಡೆ ಪೂರ್ಣ ಪ್ರಮಾಣದಲ್ಲಿ ಮನೆ ಬಿದ್ದರೂ ಅಲ್ಪ ಪರಿಹಾರಕ್ಕೆ ತಪ್ತಿಪಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಲಾನುಭವಿಗಳು ತಹಸೀಲ್ದಾರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದಾಗಿ ತಹಸೀಲ್ದಾರ್ ಕಚೇರಿಯಿಂದಲೇ ಅಕ್ರಮಕ್ಕೆ ಸಹಕಾರವಿದೆಯೇ ಎಂಬ ಅನುಮಾನ ಹುಟ್ಟಿದೆ.
ಪರಿಶೀಲಿಸದೆ ವರದಿ: ಮಳೆಯಲ್ಲಿ ಮನೆ ಹಾನಿಗೆ ಸಂಬಂಧಿಸಿದಂತೆ 24 ಗಂಟೆಗಳಲ್ಲಿ ಆಯಾ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಇಂಜಿನಿಯರ್ ಸ್ಥಳಕ್ಕೆ ಭೇಟಿ ಮಾಡಬೇಕು. ಮನೆ ಹಾನಿ ಕುರಿತು ಪರಿಶೀಲಿಸಿ, ಸರ್ಕಾರ ನೀಡಲಾದ ನಮೂನೆ ಭರ್ತಿ ಮಾಡಿಕೊಂಡು ಮನೆ ಹಾನಿ ಪ್ರಮಾಣ ನಿಗದಿ ಮಾಡಬೇಕು. ಆದರೆ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಿಡಿಒ ಮಾತ್ರ ಸ್ಥಳ ಪರಿಶೀಲಿಸಿದ್ದಾರೆ. ಬಳಿಕ ನಮೂನೆಯಲ್ಲಿ ಯಾವುದೇ ಮಾಹಿತಿ ಭರ್ತಿ ಮಾಡದೇ ಲಾನುಭವಿ ಹಾಗೂ ಪಂಚನಾಮೆಯ ಸಹಿ ಪಡೆದಿದ್ದಾರೆ. ಅಂಥದ್ದೊಂದು ಘಟನೆ ಚಿಕ್ಕೋಡಿ ತಾಲೂಕಿನ ತೋರಣಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮನೆ ಕಳೆದುಕೊಂಡು ಸರ್ಕಾರದ ಅಲ್ಪ ಪರಿಹಾರಕ್ಕಾಗಿ ಎದುರು ನೋಡುತ್ತಿರುವ ಲಾನುಭವಿಗಳಿಗೆ ಇಂಜಿನಿಯರ್, ಗ್ರಾಮ ಲೆಕ್ಕಾಧಿಕಾರಿಗಳನ್ನು ಭೇಟಿ ಮಾಡುವಂತೆ ತಿಳಿಸುತ್ತಿದ್ದಾರೆ. ಈ ವೇಳೆ ಅಧಿಕಾರಿಗಳನ್ನು ಭೇಟಿ ಮಾಡದ ಲಾನುಭವಿಗಳ ಮನೆ ಹಾನಿ ಪ್ರಮಾಣ ಕಡಿಮೆ ನಿಗದಿಪಡಿಸಿ, ಪರಿಹಾರ ಹಾಕುತ್ತಿದ್ದಾರೆ. ಈ ಕುರಿತು ಪ್ರಶ್ನೆ ಮಾಡಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸರಿಯಾದ ಪರಿಶೀಲನೆ ಮಾಡದೆ ಲಾನುಭವಿಗಳಿಗೂ ಮಾಹಿತಿ ನೀಡದೆ ಮನೆ ಹಾನಿ ಪ್ರಮಾಣ ನಿಗದಿ ಮಾಡುತ್ತಿದ್ದಾರೆ. ಇಂಜಿನಿಯರ್ ಮತ್ತು ಗ್ರಾಮ ಲೆಕ್ಕಾಧಿಕಾರಿಗಳನ್ನು ಭೇಟಿ ಮಾಡದ
ಲಾನುಭವಿಗಳು ಪೂರ್ಣ ಪ್ರಮಾಣದಲ್ಲಿ ಮನೆ ಹಾನಿಯಾಗಿದ್ದರೂ ಅಲ್ಪ ಪ್ರಮಾಣದ ಪರಿಹಾರ ಪಡೆಯುವಂತೆ ಆಗಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಮಳೆ ಹಾಗೂ ಪ್ರವಾಹದಿಂದ ಹಾನಿಯಾಗಿರುವ ಮನೆಗಳಿಗೆ ಪರಿಹಾರ ನೀಡಲಾಗುತ್ತಿದೆ. ಮನೆಬಿದ್ದಿರುವ ಸ್ಥಳ ಪರಿಶೀಲಿಸದೆ ಕಚೇರಿಯಲ್ಲಿ ಕುಳಿತು ಆಧಾರದ ಮೇಲೆ ಮನೆಹಾನಿ ವರದಿ ಸಿದ್ಧಪಡಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು.| ನಿತೇಶ ಪಾಟೀಲ ಜಿಲ್ಲಾಧಿಕಾರಿ ಸತತ ಮಳೆ, ಪ್ರವಾಹದಿಂದಾಗಿ ಮನೆಯ ಅರ್ಧಭಾಗ ಕುಸಿದಿರುವ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮನೆ ಹಾನಿ ಬಗ್ಗೆ ಒಂದು ಾರ್ಮ್ ತಂದು ಮಾಹಿತಿ ಬರೆಯದೆ ಸಹಿ ಪಡೆದು ಹೋಗಿದ್ದರು. ಬಳಿಕ ಗ್ರಾಮ ಲೆಕ್ಕಾಧಿಕಾರಿ, ಇಂಜಿನಿಯರ್ ಮತ್ತು ತಮ್ಮನ್ನು ಭೇಟಿ ಮಾಡುವಂತೆ ತಿಳಿಸಿದ್ದರು. ಆದರೆ, ಭೇಟಿಯಾಗದ್ದರಿಂದ ಶೇ.15 ಹಾನಿ ಪ್ರಮಾಣ ನಮೂದಿಸಿದ್ದಾರೆ. ಈ ಬಗ್ಗೆ ತಹಸೀಲ್ದಾರ್‌ಗೆ ದೂರು ನೀಡಿದ್ದೇನೆ.| ರಾಜು ಚೌಗುಲಾ, ತೋರಣಹಳ್ಳಿ, ಚಿಕ್ಕೋಡಿ