ದಾನವಿಲ್ಲದ ಮನೆ ಸ್ಮಶಾನಕ್ಕೆ ಸಮ

8
ನೇಜ ಗ್ರಾಮದಲ್ಲಿ ಏರ್ಪಡಿಸಿದ್ದ ನಮೋಕಾರ ಮಹಾಮಂಡಲ ವಿಧಾನ ಕಾರ್ಯಕ್ರಮದಲ್ಲಿ ಆಯುರ್ವೇದಾಚಾರ್ಯ ಶ್ರೀ 108 ಆಚಾರ್ಯ ರತ್ನ ಕುಲರತ್ನಭೂಷಣ ಮಹಾರಾಜರು ಮಾತನಾಡಿದರು.
Published on

ಮಾಂಜರಿ: ಯಾವ ಮನೆಯಲ್ಲಿ ಸಾಧುಗಳ ಸೇವೆ, ದಾನವಿಲ್ಲವೋ ಆ ಮನೆ ಸ್ಮಶಾನಕ್ಕೆ ಸಮಾನ ಎಂದು ಆಯುರ್ವೇದಾಚಾರ್ಯ ಶ್ರೀ 108 ಆಚಾರ್ಯ ರತ್ನ ಕುಲರತ್ನಭೂಷಣ ಮಹಾರಾಜರು ಮಾತನಾಡಿದರು.

ಸಮೀಪದ ನೇಜ ಗ್ರಾಮದ ಶ್ರೀ 1008 ಭಗವಾನ ಚಂದ್ರಪ್ರಭು ದಿಗಂಬರ ಜೈನ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ನಮೋಕಾರ ಮಹಾಮಂಡಲ ವಿಧಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಯೂರ ಉಪಾಧ್ಯ ಪೌರೋಹಿತ್ಯದಲ್ಲಿ ಜಲಧಾರೆ ಅಭಿಷೇಕ, ಮಹಾರಾಜರ ಚೌಕಾ, ಸವಾಲ ಕಾರ್ಯಕ್ರಮ, ನಮೋಕಾರ ಮಹಾಮಂಡಲ ವಿಧಾನ, ಮಂತ್ರಪಠಣ, ಮಹಾಆರತಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅರುಣ ಬೋನೆ, ಭಾರತಿ ಬೋನೆ, ಇಂದ್ರ ಇಂದ್ರಾಯನಿ ಇದ್ದರು. ಮಧ್ಯಾಹ್ನ ಮಂಗಲ ಪ್ರವಚನದ ನಂತರ, ಮೆರವಣಿಗೆ ನಡೆಯಿತು.

ಅಶೋಕ ವಡೇರ, ಶ್ರೀಕಾಂತ ಹುಚ್ಚಣ್ಣವರ, ಶಾಂತಿನಾಥ ಹುಚ್ಚನವರ, ಭೂಷಣ ಕಾಗೆ, ಭೂಪಾಲ ಹುಚ್ಚನವರ, ಆಹಾರ ದಾನಿಗಳಾದ ವಿಜಯಮಾಲಾ ವಡೇರ, ಕಮಲಾ ಕೆಂಪ್ರಾಣೆ, ಜಿನ್ನಪ್ಪ ವಡೇರ, ಅಕ್ಷಯ ಇಚಲಕರಂಜಿ, ವಿಧಾನ ಪ್ರಮುಖರಾದ ಶಶಿಕಾಂತ ಇಚಲಕರಂಜಿ, ಸಮಿತಿ ಅಧ್ಯಕ್ಷ ತಾತ್ಯಾಸಾಹೇಬ ಕೆಂಪ್ರಾಣೆ, ಉಪಾಧ್ಯಕ್ಷ ಅಣ್ಣಪ್ಪ ಬೋನೆ, ಸಂತೋಷ ಎ. ವಡೇರ, ಅಜಿತ್ ಬೋನೆ, ದಿನದತ್ತ ವಡೇರ, ರಾವಸಾಬ ಕರವ, ರಾವಸಾಬ ಭಿಸ್ಟನವರ, ಅಮಿತ, ಚೌಗುಲೆ, ಶ್ರೀಕಾಂತ ಹುಚ್ಚನವರ, ಕುಮಾರ ಇಚಲಕರಂಜಿ, ಶಾಂತಿನಾಥ ಕಾಗೆ, ಅನಂತ ಕಾಗೆ, ಅಕ್ಷಯ ವಡೇರ , ಶ್ರಾವಕರು, ಶ್ರಾವಕಿಯರು ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net