ಭೋರ್ಗರೆಯುತ್ತಿದೆ ಉಂಚಳ್ಳಿ ಫಾಲ್ಸ್

sdp Unachalli falls
Published on

ಸಿದ್ದಾಪುರ: ರಾಜ್ಯದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಉಂಚಳ್ಳಿ ಫಾಲ್ಸ್ ಭೋರ್ಗರೆಯುತ್ತಿದ್ದು ಜಲಪಾತ ವೀಕ್ಷಣೆಗೆ ಆಗಮಿಸಿದ ಪ್ರವಾಸಿಗರು ಪೂರ್ಣಪ್ರಮಾಣದ ವೀಕ್ಷಣೆಗೆ ಹರಸಾಹಸ ಪಡಬೇಕಾಗಿದೆ

ಎರಡು ತಿಂಗಳಿನಿಂದ ಸುರಿಯುತ್ತಿರುವ ಮಳೆಗೆ ಜಲಪಾತ ತುಂಬಿ ಹರಿಯುತ್ತಿರುವುದರಿಂದ ಉಂಚಳ್ಳಿ ಫಾಲ್ಸ್ ಭೋರ್ಗರೆಯುತ್ತ ಧುಮ್ಮಿಕ್ಕುತ್ತಿದ್ದು, ಇದರ ನಡುವೆ ಆಗಾಗ ಸುರಿಯುತ್ತಿರುವ ಮಳೆಗೆ ಜಲಪಾತದ ಸುತ್ತಲೂ ಮಂಜು ತುಂಬಿಕೊಂಡು ಪ್ರವಾಸಿಗರ ವೀಕ್ಷಣೆಗೆ ತೊಡಕನ್ನುಂಟು ಮಾಡುತ್ತಿದೆ. ಪೂರ್ಣಪ್ರಮಾಣದ ವೀಕ್ಷಣೆಗೆ ಗಂಟೆಗಟ್ಟಲೆ ಕಾಯುತ್ತ ಪ್ರವಾಸಿಗರು ಸಂತಸಪಡುತ್ತಿದ್ದಾರೆ.

ಜಲಪಾತ ವೀಕ್ಷಣೆಗೆ ರಾಜ್ಯದ ಹಲವು ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸಿ ಭೋರ್ಗರೆಯುತ್ತ ಧುಮ್ಮಿಕ್ಕುತ್ತಿರುವ ಜಲಧಾರೆಯನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net