

ಕೋಲಾರ: ಈಗಿನ ಕಾಲದಲ್ಲಿ ಮನುಷ್ಯ, ಪ್ರಕೃತಿ ನಡುವೆ ಹೊಂದಾಣಿಕೆ ಇಲ್ಲದೆ ಇರುವುದರಿಂದ ಪೈಪೋಟಿ ಏರ್ಪಟ್ಟಿದೆ. ಇದನ್ನು ಬಿಟ್ಟು ನಿಸರ್ಗವನ್ನು ರಸಿ, ಬೆಳೆಸುವ ಕೆಲಸ ಮಾಡಬೇಕು ಎಂದು ರಾಜ್ಯ ಉಪ ಲೋಕಾಯುಕ್ತ ಬಿ.ವೀರಪ್ಪ ಹೇಳಿದರು.
ತಾಲೂಕಿನ ಮಾರ್ಕಂಡೇಶ್ವರ ಬೆಟ್ಟದ ತಪ್ಪಲಿನಲ್ಲಿ ಕರ್ನಾಟಕ ಲೋಕಾಯುಕ್ತ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ, ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ಪ್ರಸ್ತುತ ಆರ್ಟಿಫಿಷಿಯಲ್ ಆಗಿದೆ. ಮರಗಳ ಸಂಖ್ಯೆ ಕಡಿಮೆಯಾಗಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಇದರಿಂದ ಪರಿಣಾಮ ಎದುರಿಸುತ್ತಿದ್ದರೂ, ಮನುಷ್ಯ ಎಚ್ಚೆತ್ತುಕೊಳ್ಳುತ್ತಿಲ್ಲ. ಪ್ರಕೃತಿಯು ಸಹ ಜೀವನದ ಅಂಗ. ಎಚ್ಚೆತ್ತುಕೊಳ್ಳದಿದ್ದರೆ ಭೂಕಂಪ ಆಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.
ಪಾಲಕರು ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕು, ಎಷ್ಟೇ ದೊಡ್ಡವರಾದರೂ ಪೂರ್ವಿಕರನ್ನು ಮರೆಯಬಾರದು. ಒತ್ತಾಯ ಮಾಡಿ ಅಂಕಗಳಿಸುವ ಯಂತ್ರಗಳನ್ನಾಗಿ ಮಾಡಬೇಡಿ, ಉತ್ತಮ ವ್ಯಕ್ತಿಗಳಾಗುವ ಸಂಕಲ್ಪ ಮಾಡಿಸಬೇಕು ಎಂದು ಸಲಹೆ ನೀಡಿದರು.
ಗಿಡ&ಮರಗಳು ನಿಸ್ವಾರ್ಥ ಜೀವಿಗಳಿದ್ದಂತೆ. ಕಾಡಿನಲ್ಲಿರುವ ಹುಲಿ, ಸಿಂಹಗಳು ಹಸಿವಾದಾಗ ಬೇಟೆಯಾಡುತ್ತವೆ. ಆದರೆ ಮಾನವ ಸ್ವಾರ್ಥಿ, ಕಾಡು, ಕೆರೆ ಕಟ್ಟೆ ಹೀಗೆ ಎಲ್ಲವೂ ನನಗೆ ಬೇಕು ಅಂತಾನೆ, ಇದರಿಂದ ಪ್ರಕೃತಿ ನಮ್ಮ ಮೇಲೆ ಕೋಪಗೊಂಡಿದ್ದು, ಆಗಾಗ ಅದರ ಪ್ರತಾಪ ತೋರಿಸುತ್ತದೆ. ಸಿಕ್ಕಿಂ, ಅಸ್ಸಾಂ ಕಡೆ ನಡೆದಿರುವ ವಿಕೋಪಕ್ಕೆ ಲಕ್ಷಾಂತರ ಆಸ್ತಿಪಾಸ್ತಿ ಹಾನಿಯಾಗಿರುದೇ ಸಾ ಎಂದರು.
ಲೋಕಾಯುಕ್ತ ವಿಚಾರಣ ಉಪ ನೋಂದಣಾಧಿಕಾರಿ ಎನ್.ವಿ.ಅರವಿಂದ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರವಿಣ್ ಪಿ.ಬಾಗೇವಾಡಿ, ಲೋಕಾಯುಕ್ತ ಎಸ್ಪಿ ಧನಂಜಯ, ಎಸ್ಪಿಗಳಾದ ಕೋಲಾರ ಬಿ.ನಿಖಿಲ್, ಕೆಜಿಎ್ ಕೆ.ಎಂ.ಶಾಂತರಾಜು, ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಎಚ್.ಪಿ.ಎಸ್, ತಹಸೀಲ್ದಾರ್ ಡಾ.ಎಂ.ನಯನಾ, ನ್ಯಾಯಾಧೀಶೆ ರೇಖಾ, ಸಾಮಾಜಿಕ ಉಪ ಸಂರಕ್ಷಣಾಧಿಕಾರಿ ಆನಂದ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಹೇಶ್, ಗಿರೀಶ್, ಧನಲಕ್ಷಿ$್ಮ, ಪುಷ್ಪಲತಾ ಉಪಸ್ಥಿತರಿದ್ದರು.
ಮಕ್ಕಳೆಲ್ಲ ಹಸಿರು ಸೈನಿಕರಾಗಲಿ
ಮನುಷ್ಯ ಪ್ರಕೃತಿಯೊಂದಿಗೆ ಬೇರೆತು ಜೀವನ ನಡೆಸಬೇಕು. ಆಗ ಮಾತ್ರ ಪರಿಸರ ಉಳಿಸಿ&ಬೆಳೆಸುವ ಮನೋಭಾವ ಬೆಳೆಸಿಕೊಳ್ಳುತ್ತಾರೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಎಂದು ಹೇಳಿದರು. ನಿತ್ಯ ಕಾಡಿನೊಂದಿಗೆ ಒಡನಾಟ ಇಟ್ಟುಕೊಂಡಿರುವವರು ಇನ್ನೊಬ್ಬರ ಜೀವನದ ಬಗ್ಗೆ ಕಾಳಜಿ ವಹಿಸುತ್ತಾರೆ. ಪರಿಸರವು ಒಬ್ಬರ ಹಾನಿ ಬಯಸುವುದಿಲ್ಲ, ತನ್ನಂತೆ ಜೀವಿಸಲು ಸಹಕಾರ ನೀಡುತ್ತದೆ. ಮನುಷ್ಯ ಒಬ್ಬನೇ ಕಡು ಸ್ವಾರ್ಥಿ. ಪ್ರಕೃತಿಯು ತಾಯಿನೆ, ನಮಗೆ ತಾಯಿ ಸಂಸ್ಕಾರ ಕಲಿಸಿದರೆ, ತಂದೆ ವಿದ್ಯೆ ಕಲಿಸುತ್ತಾರೆ. ಈಗ ನೆಮ್ಮದಿಗಾಗಿ ಕಾಡಿಗೆ ಹೋಗುಬಹುದು. ಜಲ ಇದ್ದರೆ ಜೀವ ಇರುತ್ತದೆ, ಇದರಿಂದಾಗಿ ಜಲಕಾಯ, ಅರಣ್ಯವನ್ನು ರಕ್ಷಣೆ ಮಾಡಲು ಮುಂದಾಗಬೇಕು. ಮಕ್ಕಳೆಲ್ಲ ಹಸಿರು ಸೈನಿಕರಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಅರಣ್ಯೀಕರಣಕ್ಕೆ ಕಾರ್ಯಕ್ರಮ ಜಾರಿ
ಜಿಲ್ಲೆಯ ಪ್ರಾದೇಶಿಕ ಅರಣ್ಯ ಉಪ ವಿಭಾಗದ ವ್ಯಾಪ್ತಿಗೆ 3,969 ಚ.ಕಿ.ಮಿ ಒಳಪಟ್ಟಿದ್ದು, ಒಟ್ಟು ಭೂ ಪ್ರದೇಶದಲ್ಲಿ ಶೇ.11.8 ಅರಣ್ಯ ಪ್ರದೇಶದಿಂದ ಆವೃವಾಗಿದೆ. ಒತ್ತುವರಿಯಾಗಿದ್ದು 2,800 ಹೆಕ್ಟೇರ್ ತೆರವುಗೊಳಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗರ್ ಹೇಳಿದರು. ಜಿಲ್ಲೆಯಲ್ಲಿ ಅರಣ್ಯಗಳ ಸಮರ್ಥನೀಯ ನಿರ್ವಹಣೆ ಮೂಲಕ ಪರಿಸರ ಭದ್ರತೆ ಮತ್ತು ಪರಿಸರ ಸಮತೋಲನ ಖಾತ್ರಿಪಡಿಸಲು ಕ್ರಮವಹಿಸಲಾಗಿದೆ. ಅರಣ್ಯೀಕರಣ ಮತ್ತು ವನ್ಯಜಿವಿ ಉಳಿವಿಗೆ ಕಾರ್ಯಕ್ರಮ ಆಯೋಜಿಸಿ ಸಮರ್ಪಕವಾಗಿ ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ತಿಳಿಸಿದರು.
ಬೆಳೆ ಕಟಾವಿಗೆ ಸಮಯ ಕೊಡಿ
ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ರೈತರು ಬೆಳೆದಿರುವ ಬೆಳೆ ಕಟಾವು ಮಾಡಿಕೊಳ್ಳಲು ಅಧಿಕಾರಿಗಳು ಅವಕಾಶ ಕೊಡಬೇಕು. ಫೋಟೊಗೆ ೋಸು ಕೊಡೊ ಕೆಲಸ ಮಾಡಬೇಡಿ. ಅವರು ಬಂಡವಾಳ ಹಾಕಿ ಬೆಳೆ ಬೆಳೆದಿರುತ್ತಾರೆ. ರೈತರು, ಸೈನಿಕರು ದೇಶದ ಬೆನ್ನೆಲುಬು ಅಂತ ಹೇಳುತ್ತೇವೆ. ಮಾನವೀಯತೆ ತೋರಬೇಕು. ದರ್ಪ ತೋರಬಾರದು. ಕಾನೂನು ಪ್ರಕಾರ ತೆಗೆದುಕೊಳ್ಳುವ ಕ್ರಮವನ್ನು ಯಾರು ಬೇಡ ಅನ್ನಕ್ಕೆ ಆಗಲ್ಲ ಎಂದು ವೀರಪ್ಪ ತಿಳಿಸಿದರು.