

ಹುನಗುಂದ: ತರಕಾರಿ ಮಾರುಕಟ್ಟೆಗೆ ಹೊಂದಿಕೊಂಡಿರುವ ಪುರಸಭೆ ಸ್ಥಳದಲ್ಲಿ ಅಕ್ರಮವಾಗಿ ಠಿಕಾಣಿ ಹೂಡಿದ್ದ ಗೂಡಂಗಡಿಗಳನ್ನು ಪುರಸಭೆಯಿಂದ ಸೋಮವಾರ ತೆರವುಗೊಳಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಮಾತನಾಡಿ, ಬಸ್ ನಿಲ್ದಾಣ ಸಮೀಪದ ತರಕಾರಿ ಮಾರುಕಟ್ಟೆಗೆ ಬರಲು ಜನರು ತೊಂದರೆ ಅನುಭವಿಸುತ್ತಿದ್ದರು. ಸಾರ್ವಜನಿಕರು ಹಿತದೃಷ್ಟಿಯಿಂದ ಪುರಸಭೆ ಸ್ಥಳದಲ್ಲಿದ್ದ ಈ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂದರು.
ಪುರಸಭೆ ಸಿಬ್ಬಂದಿ ಮಹಾಂತೇಶ ತಾರಿವಾಳ, ಬಾಬು ಲೈನ್, ಮುತ್ತಣ್ಣ ಹುಣಶಾಳ, ನಿರುಪಾದಿ ಬದಾಮಿ, ಪಕೀರಪ್ಪ ಮರ್ಜಿ, ಪರಸಪ್ಪ ನಡುವಿನಮನಿ, ಹುಸೇನಪ್ಪ ಹಿರೇಮನಿ, ಬಸಯ್ಯ ಹಿರೇಮಠ ಕಾರ್ಯಾಚರಣೆಯಲ್ಲಿ ಇದ್ದರು.