

ಲಿಂಗಸುಗೂರು: ಪಟ್ಟಣದಲ್ಲಿ ರಸ್ತೆ ಬದಿ ವ್ಯಾಪಾರಿಗಳಿಂದ ಜಾಗದ ಹೆಸರಿನಲ್ಲಿ ಕೆಲ ಪ್ರಭಾವಿಗಳು ಬಾಡಿಗೆ ವಸೂಲಿ ಮಾಡುತ್ತಿದ್ದು, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪುರಸಭೆ ಎಫ್‌ಡಿಸಿ ಶಿವಲಿಂಗ ಮೇಗಳಮನಿಗೆ ಕರ್ನಾಟಕ ರಕ್ಷಣಾ ವೇದಿಕೆ (ಶೆಟ್ಟಿಬಣ) ಕಾರ್ಯಕರ್ತರು ಗುರುವಾರ ಮನವಿ ಸಲ್ಲಿಸಿದರು.
ಬಸ್ ನಿಲ್ದಾಣ ರಸ್ತೆ, ಹಳೆಯ ಬಸ್ ನಿಲ್ದಾಣ, ಬಸವಸಾಗರ ಕ್ರಾಸ್, ಎಸ್‌ಬಿಐ, ಪದವಿಪೂರ್ವ ಕಾಲೇಜು ಮುಂಭಾಗ, ರಾಯಚೂರು ರಸ್ತೆ, ಬೆಂಗಳೂರು ಬೈಪಾಸ್ ರೋಡ್ ಸೇರಿ ವಿವಿಧೆಡೆ ಡಬ್ಬಾ ಅಂಗಡಿಯಿಟ್ಟು ಬಡವರು ಜೀವನ ಸಾಗಿಸುತ್ತಿದ್ದಾರೆ. ಆದರೆ, ಕೆಲ ಪ್ರಭಾವಿಗಳು ವ್ಯಾಪಾರಿಗಳಿಂದ ಪ್ರತಿ ದಿನಕ್ಕೆ 100 ರೂ. ವಸೂಲಿ ಮಾಡುತ್ತಿದ್ದು, ಪುರಸಭೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ನಿರ್ಲಕ್ಷೃ ವಹಿಸಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.