ಉಣಕಲ್ ಕೆರೆ ಜಲ ಕ್ರೀಡೆ ಉದ್ಘಾಟಿಸಿ ವಿಹಾರ

h28-Boating 2
Published on

ಹುಬ್ಬಳ್ಳಿ: ಇಲ್ಲಿಯ ಉಣಕಲ್ ಕೆರೆಯಲ್ಲಿ ಜಲ ಕ್ರೀಡೆಗಳಿಗೆ ಭಾನುವಾರ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಸೇರಿ ಇತರರು, ನಂತರ ಬೋಟ್‌ನಲ್ಲಿ ವಿಹಾರ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಲ್ಹಾದ ಜೋಶಿ, ಮಹಾನಗರ ಪಾಲಿಕೆ ವತಿಯಿಂದ ಕೆರೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಈಗ ಜಲ ವಿಹಾರಕ್ಕೆ ಬೋಟ್‌ಗಳನ್ನು ಅಳವಡಿಸಲಾಗಿದೆ. ಇದರ ಪ್ರಯೋಜವನ್ನು ಜನರು ಪಡೆದುಕೊಳ್ಳಬೇಕು. ಕೆರೆ ಇನ್ನಷ್ಟು ಅಭಿವೃದ್ಧಿ ಕುರಿತಂತೆ ಪಾಲಿಕೆ ಆಯುಕ್ತರ ಜತೆಗೆ ಮಾತನಾಡುವೆ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಮಲ್ಲಿಕಾರ್ಜುನ ಗುಂಡೂರ, ಉಮೇಶಗೌಡ ಕೌಜಗೇರಿ, ಬೀರಪ್ಪ ಖಂಡೇಕರ, ಶಿವು ಹಿರೇಮಠ, ಚಂದ್ರಿಕಾ ಮೇಸ್ತ್ರಿ, ಪ್ರಮುಖರಾದ ರವಿ ನಾಯಕ, ರಾಜು ಕಾಳೆ, ಈಶ್ವರಗೌಡ ಪಾಟೀಲ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಸ್ಮಾರ್ಟ್ ಸಿಟಿ ಕಂಪನಿಯ ಪ್ರಧಾನ ವ್ಯವಸ್ಥಾಪಕ ಚನ್ನಬಸವರಾಜು, ಇತರರು ಇದ್ದರು.

ಓಂ ವಾಟರ್ ಸ್ಪೋರ್ಟ್ಸ್‌ನವರು ಕೆರೆಯಲ್ಲಿ ಮೋಟರ್ ಬೋಟ್, ಪೆಡಲ್ ಬೋಟ್, ವಾಟರ್ ಬೋಟ್, ಕಯಾಕಿಂಗ್, ಜೆಟ್‌ಸ್ಕಿ ಸೇರಿ ಇತರ ಬೋಟ್‌ಗಳನ್ನು ವಿಹಾರಕ್ಕೆ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net