ಗುರುವಿನಿಂದ ನಿಷ್ಕಲ್ಮಶ ಪ್ರೀತಿ

Published on

ವಿಜಯಪುರ : ಹರ ಮುನಿದರೆ ಕಾಯುವ ಗುರು ಎಲ್ಲರಿಗಿಂತ ಪರಮ ಶ್ರೇಷ್ಠನಾಗಿದ್ದಾನೆ ಎಂದು ಬಿಎಲ್​ಡಿಇ ಸಂಸ್ಥೆಯ ಎವಿಎಸ್​ ಆಯುರ್ವೇದ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಹೇಳಿದರು.

ನಗರದ ಬಿಎಲ್​ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ಪಬ್ಲಿಕ್​ (ಸಿಬಿಎಸ್​ಸಿ) ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನಲ್ಲಿ ತಾಯಿ ಮತ್ತು ಗುರು ಮಾತ್ರ ನಿಷ್ಕಲ್ಮಶ ಪ್ರೀತಿ ಕೊಡಬಲ್ಲರು. ತಾಯಿ ಮತ್ತು ಗುರುವಿನ ಋಣದಿಂದ ಹೊರಬರಲು ಸಾಧ್ಯವಿಲ್ಲ. ಗುರುವಾದವರು ನಿಷ್ಪಪಾತವಾಗಿರಬೇಕು. ಧನಾತ್ಮಕ ಮನೋಭಾವ ಹೊಂದಿರಬೇಕು. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಮಿಸಬೇಕು. ಮಾತೃಋಣ, ಪಿತೃಋಣ, ಗುರು ಋಣ ಬಹುಮುಖ್ಯ ಎಂದರು.

ಶಾಲೆ ಪ್ರಾಚಾಯೆರ್ ಡಾ. ಶೈಜು ನಾಯರ ಗುರು ಪೂರ್ಣಿಮಾ ಮಹತ್ವ ವಿವರಿಸಿದರು. ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ ಮತ್ತಿತರರಿದ್ದರು. ಅನುಪ್ರಿಯಾ ಕುಲಕರ್ಣಿ ಸ್ವಾಗತಿಸಿದರು. ಖುಷಿ ಬೆಹತಿ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net