

ಬಂಕಾಪುರ: ತಮಗೆ ಯಾವುದೆ ಆಸ್ತಿ ಸಿಗಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಟನೆ ಇಲ್ಲಿಗೆ ಸಮೀಪದ ಮುಗಳಿಕಟ್ಟಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಚನ್ನಪ್ಪ ಈರಪ್ಪ ಯಾದಣ್ಣನವರ (34) ಮೃತ ವ್ಯಕ್ತಿ.
ಈತನ ತಂದೆಯ 1ನೇ ಪತ್ನಿ ಎಲ್ಲ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದರಿಂದ ತನಗೆ ಯಾವುದೆ ಆಸ್ತಿ ಸಿಗಲಿಲ್ಲ ಎಂದು ಮಾನಸಿಕ ಮಾಡಿಕೊಂಡು ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.