ತೇಲಿ ಬಂದ ವಸ್ತುವಿನಿಂದ ಬಾಡ ತೀರದಲ್ಲಿ ಆತಂಕ ಸೃಷ್ಟಿ

Unnoun-cylinder-found-at-kumata
Published on

ಕುಮಟಾ: ತಾಲೂಕಿನ ಬಾಡ ಕಡಲ ತೀರದಲ್ಲಿ ಹಡಗಿನ ಬಿಡಿ ಭಾಗವೊಂದು ಶುಕ್ರವಾರ ಬೆಳಗ್ಗೆ ತೇಲಿ ಬಂದು ಬಿದ್ದು, ಸ್ಥಳೀಯರಲ್ಲಿ ಕೆಲ ಕಾಲ ಆತಂಕ ಸೃಷ್ಟಿಸಿತ್ತು.
ಸುಮಾರು 4 ಅಡಿ ಎತ್ತರ, 2.5 ಅಡಿ ಅಗಲದ ಸಿಲಿಂಡರ್ ಗಾತ್ರದ ಲೋಹದ ವಸ್ತು ತೀರದಲ್ಲಿ ಕಂಡು ಬಂತು. ಸ್ಥಳೀಯ ಮೀನುಗಾರರು ಅದನ್ನು ಕಂಡು ಆತಂಕಗೊಂಡಿದ್ದರು.

ಪರಿಶೀಲಿಸಿ ಪೊಲೀಸ್ ಮತ್ತು ಕರಾವಳಿ ಕಾವಲುಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳೀಯ ಮೀನುಗಾರರ ಮುಖಂಡ ನಾಗರಾಜ ಹಿಣಿ ಹಾಗೂ ಇತರರು ಅದನ್ನು ಗ್ಯಾಸ್ ಕಟರ್ ಬಳಸಿ ತುಂಡರಿಸಿ ನೋಡಿದಾಗ ಅಲ್ಪ ಪ್ರಮಾಣದ ದ್ರವ ಸ್ವರೂಪದ ಇಂಧನ ಪತ್ತೆಯಾಗಿದೆ.

ಇದನ್ನೂ ಓದಿ: ಆಸ್ಪತ್ರೆಯ ತೊಟ್ಟಿಲಲ್ಲಿ ನವಜಾತ ಶಿಶು ಪತ್ತೆ
ಇದು ವಾಣಿಜ್ಯ ಹಡಗುಗಳಲ್ಲಿ ಇಂಧನ ಪೂರೈಕೆಗೆ ಬಳಸುವ ಒಂದು ವಸ್ತುವಾಗಿದೆ. ಆಳ ಸಮುದ್ರದಲ್ಲಿ ಹಡಗು ಮುಳುಗಿ ಅಥವಾ ಬರ‍್ಯಾವುದೋ ಕಾರಣಕ್ಕೆ ಬೇರಾಗಿರುವುದು ತೇಲಿ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಯಾವುದೇ ಅಪಾಯವಿಲ್ಲ ಎಂದು ಕರಾವಳಿ ಕಾವಲುಪಡೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net