ಅಧ್ಯಕ್ಷರಾಗಿ ಉಮ್ಮಾಜಿ ಚವ್ಹಾಣ ಅವಿರೋಧ ಆಯ್ಕೆ

Ummaji Chavan, Brahmadevanamadu, Sindagi, Honnalli, Karavinala Tanda, Ummaji Chavan, Returning Officer Ramu Agni,
ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಉಮ್ಮಾಜಿ ಚವ್ಹಾಣ ಅವಿರೋಧ ಆಯ್ಕೆಯಾಗಿದ್ದಕ್ಕೆ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ವಿಜುಗೌಡ ಬಿರಾದಾರ, ಬಸನಗೌಡ ಪಾಟೀಲ, ಬಸವರಾಜ ಮಾರಲಭಾವಿ, ಎಂ.ಪಿ.ರಾಠೋಡ ಇದ್ದರು.
Published on

ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕರವಿನಾಳ ತಾಂಡಾದ ಸದಸ್ಯ ಉಮ್ಮಾಜಿ ಚವ್ಹಾಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಮು ಅಗ್ನಿ ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿಯ 16 ಸದಸ್ಯರಲ್ಲಿ 12 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಅಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಿತು. ಗ್ರಾಪಂ ಪಿಡಿಒ ಎಸ್.ಸಿ.ನಾಯ್ಕೋಡಿ ಇದ್ದರು.

ನೂತನ ಅಧ್ಯಕ್ಷ ಉಮ್ಮಾಜಿ ಚವ್ಹಾಣ ಮಾತನಾಡಿ, ಹೊನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸುವೆ. ಎಲ್ಲರೂ ಸಹಕಾರ ನೀಡಬೇಕು ಎಂದರು.

ಪ್ರಮುಖರಾದ ವಿಜುಗೌಡ ಬಿರಾದಾರ, ಗ್ರಾಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ಬಸವರಾಜ ಮಾರಲಭಾವಿ, ಶರಣಗೌಡ ಪಾಟೀಲ ಡಂಬಳ, ಶ್ರೀಶೈಲ ಜಾಲವಾದಿ, ಎಂ.ಪಿ.ರಾಠೋಡ, ಮೇಘರಾಜ ಚವ್ಹಾಣ, ಪುಂಡಲಿಕ ರಾಠೋಡ, ಯಾಸ್ಮೀನ್ ಬಾನು ನಾಯ್ಕೋಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net