ಉಮೇಶ ಕತ್ತಿ ಕೆಲಸಗಳು ಶಾಶ್ವತ

6Huk1
Published on

ಹುಕ್ಕೇರಿ: ಜನಪರ ಕಾರ್ಯಗಳು ಹೆಸರು ಮತ್ತು ಜನಪ್ರಿಯತೆ ತಂದುಕೊಡುತ್ತವೆ ಎಂಬುದಕ್ಕೆ ತಂದೆ ದಿ.ಉಮೇಶ ಕತ್ತಿ ಅವರೇ ಸಾಕ್ಷಿ. ಅವರು ಮಾಡಿದ ಕೆಲಸಗಳು ಶಾಶ್ವತವಾಗಿ ಉಳಿಯುವಂಥವು ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಶನಿವಾರ ಮಾಜಿ ಸಚಿವ ದಿ.ಉಮೇಶ ಕತ್ತಿ ಅವರ ತೃತೀಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂದೆಯ ನಿಧನಾನಂತರ ನಮ್ಮ ಕುಟುಂಬಕ್ಕೆ ಧೈರ್ಯ ತುಂಬಿ ನಿಮ್ಮ ಜತೆಗೆ ನಾವಿದ್ದೇವೆ ಎಂಬ ಭರವಸೆಯಿತ್ತ ಕ್ಷೇತ್ರದ ಜನರು ಪ್ರೀತಿ, ವಿಶ್ವಾಸ ತೋರಿದ್ದಾರೆ ಎಂದರು.

ವಿಶ್ವರಾಜ ಶುಗರ್ಸ್ ಆವರಣದಲ್ಲಿ ದಿ.ಉಮೇಶ ಕತ್ತಿ ಅವರ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾತನಾಡಿದ ಮಾಜಿ ಸಂಸದ ರಮೇಶ ಕತ್ತಿ ನಮ್ಮ ಅಣ್ಣ ಇಲ್ಲವೆಂಬ ಭಾವ ಬರುತ್ತಿಲ್ಲ, ಅವರು ನಮ್ಮ ಜತೆಗಿದ್ದಾರೆ ಎಂಬ ಭಾವ ನನ್ನದಾಗಿದೆ. ಆದರೂ ಭೌತಿಕವಾಗಿ ಅವರಿಲ್ಲ ಎಂಬ ನೋವನ್ನು ಮರೆಯುತ್ತಿದ್ದೇವೆ ಎಂದರು.

ಉಮೇಶ ಕತ್ತಿ ಅವರ ಭಾವಚಿತ್ರಗಳಿಗೆ ನಮಿಸಲಾಯಿತು. ಶಾಸಕ ನಿಖಿಲ ಕತ್ತಿ ಜನರೊಂದಿಗೆ ಉಮೇಶ ಕತ್ತಿ ಅವರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು.

ಅರ್ಬನ್ ಬ್ಯಾಂಕ ಚೇರ್ಮನ್ ಪವನ ಕತ್ತಿ, ಸಂದೀಪ ಕತ್ತಿ, ಸುಧೀರ ಕತ್ತಿ, ಮುರಗೇಶ ಕತ್ತಿ, ಕಿಶೋರ ಕತ್ತಿ, ಚೇತನ ಕತ್ತಿ, ವಿನೋದ ಕತ್ತಿ, ಸಂಗಪ್ಪ ಕತ್ತಿ, ಗಿರಿಮಲ್ಲಯ್ಯ ಮಠಪತಿ, ಅಶೋಕ ಬೆಲ್ಲದ, ಸತೀಶ ಜಾಗನೂರಿ, ಮುರಗೇಶ ಮಾಳಗಿ, ಲಕ್ಷ್ಮಣ ರಾಮದುರ್ಗಿ, ಬಿ.ಎಸ್.ಪೂಜೇರಿ, ಮುಖಂಡರಾದ ದಿಲೀಪ ವಾಳಿಖಿಂಡಿ, ಗಜಾನನ ಕ್ವಳ್ಳಿ, ಕಲಗೌಡ ಪಾಟೀಲ, ಬಸವರಾಜ ಹುಂದ್ರಿ, ರಾಚಯ್ಯ ಹಿರೇಮಠ, ಅರ್ಜುನ ಯಲ್ಲನಾಯ್ಕ ಪಾಟೀಲ, ಮಹಾನಿಂಗ ಸನದಿ, ಎಸ್.ಆರ್.ಕರ್ಕಿನಾಯಿಕ, ಸುಚಿತ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net