

ಹುಕ್ಕೇರಿ: ಕುಟುಂಬಕ್ಕೆ ಸೀಮಿತವಾಗಿ ಮಾಜಿ ಸಚಿವ ಉಮೇಶ ಕತ್ತಿ ಅವರ ಪ್ರಥಮ ಪುಣ್ಯಸ್ಮರಣೆ ಆಚರಿಸಲು ಮುಂದಾದರೂ ಜನರು ಸಮಾಗೆ ಭೇಟಿ ನೀಡಿ ಗೌರವ ಸಲ್ಲಿಸುತ್ತಿದ್ದಾರೆ. ಉಮೇಶ ಕತ್ತಿ ಜನಮನದ ನಾಯಕ ಎನ್ನಲು ಇದು ನಿದರ್ಶನ ಎಂದು ಮುಖಂಡ ಶ್ರೀಶೈಲ ಹಿರೇಮಠ ಹೇಳಿದರು.
ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಮಾಜಿ ಸಚಿವ ದಿ.ಉಮೇಶ ಕತ್ತಿ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಬುಧವಾರ ಸಮಾಗೆ ಪೂಜೆ ಸಲ್ಲಿಸಿ ಮಾತನಾಡಿದರು.
ತಂದೆ, ಅಜ್ಜ, ಅಜ್ಜಿ ಸಮಾಗೆ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕ ನಿಖಿಲ್ ಕತ್ತಿ, ಸೆಪ್ಟೆಂಬರ್ ತಿಂಗಳಲ್ಲಿ ಹಬ್ಬಗಳು ಹೆಚ್ಚಾಗಿ ಬರುವುದರಿಂದ ಜನರಿಗೆ ಸಮಸ್ಯೆಯಾಗುತ್ತದೆ ಎಂದು ಭಾವಿಸಿ ನಮ್ಮ ಕುಟುಂಬಕ್ಕೆ ಸೀಮಿತವಾಗಿ ಪುಣ್ಯಸ್ಮರಣೆ ಆಚರಿಸಲು ನಿರ್ಧರಿಸಲಾಗಿದೆ. ಹಿತೆಷಿಗಳು, ಅಭಿಮಾನಿಗಳು ಮತ್ತು ಸಾರ್ವಜನಿಕರು ಅನ್ಯತಾ ಭಾವಿಸಬಾರದು ಎಂದರು.
ಮುರುಗೇಶ ಕತ್ತಿ, ಸಂದೀಪ ಕತ್ತಿ, ಕಿಶೋರ ಕತ್ತಿ, ಸುೀರ ಕತ್ತಿ, ಸಂಗಮೇಶ ಕತ್ತಿ, ಚೇತನ ಕತ್ತಿ, ಸಂಕೇತ ಕತ್ತಿ, ಸಿದ್ಲಿಂಗಸ್ವಾಮಿ ಕಡಹಟ್ಟಿ, ಲಕ್ಷ್ಮಣ ರಾಮದುರ್ಗಿ, ಎಸ್.ಆರ್.ಕರ್ಕಿನಾಯಿಕ, ಶೇಖರ ಥರಕಾರ, ಸದಾಶಿವ ಮರಬಸ್ಸನವರ, ರಮೇಶ ಹುಂಜಿ, ಕೆ.ಸಿ.ಮುಚಖಂಡಿ, ಆನಂದ ಲಕ್ಕುಂಡಿ, ಬಸಗೌಡ ಮಗೆನ್ನವರ, ಕಲಗೌಡ ಮಲಗೌಡನವರ, ಅರುಣ ಹುದ್ದಾರ, ಪಿ.ಡಿ.ಚೌಗಲಾ, ಶಹಜಾನ ಬಡಗಾಂವಿ, ಮುನೀರ್ ಕಳಾವಂತ ಮತ್ತಿತರರಿದ್ದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ, ಸಹಕಾರಿ ಸಂಘ, ಸಂಸ್ಥೆಗಳು, ಪಿಕೆಪಿಎಸ್‌ಗಳಲ್ಲಿ ಮಾಜಿ ಸಚಿವ ಉಮೇಶ ಕತ್ತಿ ಭಾವಚಿತ್ರಕ್ಕೆ ಸಾರ್ವಜನಿಕರು, ಜನಪ್ರತಿನಿಗಳು ಪೂಜೆ ಸಲ್ಲಿಸಿ, ಗೌರವಿಸಿದರು.