ಉಮೇಶ್ ಹುಳಿಗೆರೆ ಸಹಕಾರ ಸಂಘದ ಅಧ್ಯಕ್ಷ

17KDR3
ಹುಳಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ನಿರ್ದೇಶಕರು ಅಭಿನಂದಿಸಿದರು. ಚಿನ್ನುದೇವರಾಜ್, ಡಿ.ಎಂ.ಯೋಗೇಶ್, ಎಚ್.ಎಸ್. ರಮೇಶ್, ಡಿ.ಎಂ. ದಕ್ಷಿಣ ಮೂರ್ತಿ, ಡಿ.ಎಂ.ಲಿಂಗೇಶ್ ಮತ್ತಿತರಿದ್ದರು.
Published on

ಕಡೂರು: ತಾಲೂಕಿನ ಹುಳಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಎಸ್.ಉಮೇಶ್, ಉಪಾಧ್ಯಕ್ಷೆಯಾಗಿ ಎಂ.ಆಶಾ ಕುಮಾರಪ್ಪ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಸಹಕಾರ ಸಂಘ ಸಹಾಯಕ ನಿರ್ದೇಶಕಿ ಅನುಪಮಾಕಾರ್ಯನಿರ್ವಹಿಸಿದರು. ನಂತರ ನಡೆದ ಅಭಿನಂದನಾ ಸಭೆಯಲ್ಲಿ ಅಧ್ಯಕ್ಷ ಎಚ್.ಎಸ್.ಉಮೇಶ್ ಮಾತನಾಡಿ, ಸಂಘದ ಸದಸ್ಯರ ಸಹಕಾರದೊಂದಿಗೆ ಸಂಘದ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಈ ನಿಟ್ಟಿನಲ್ಲಿ ಷೇರುದಾರರ ಸಹಕಾರ ಅವಶ್ಯಕ ಎಂದರು. ನಿರ್ದೇಶಕರಾದ ಚಿನ್ನುದೇವರಾಜ್, ಡಿ.ಎಂ.ಯೋಗೇಶ್, ಎಚ್.ಎಸ್. ರಮೇಶ್, ಡಿ.ಎಂ.ದಕ್ಷಿಣಮೂರ್ತಿ, ಡಿ.ಎಂ.ಲಿಂಗೇಶ್, ಪುಟ್ಟಪ್ಪಶಿವಲಿಂಗಪ್ಪ, ಹನುಮಂತಪ್ಪ, ವೀರಭದ್ರಪ್ಪ, ಉಮಾ, ಮೇಲ್ವಿಚಾರಕ ರಾಘವೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net