ಬಿಜೆಪಿ ರೋಣ ಮಂಡಲ ಅಧ್ಯಕ್ಷರಾಗಿ ಉಮೇಶ ಆಯ್ಕೆ

GJD BJP
Published on

ಗಜೇಂದ್ರಗಡ: ಬಿಜೆಪಿ ರೋಣ ಮಂಡಲ ಅಧ್ಯಕ್ಷರಾಗಿ ಉಮೇಶ ಮಲ್ಲಾಪುರ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷ ಮುತ್ತು ಕಡಗದ ಅವರು ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಮಾಜಿ ಸಚಿವ ಕಳಕಪ್ಪ ಬಂಡಿ ಗೃಹ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾ ಅಧಿಕಾರಿ ಎಂ.ಎಸ್. ಕರಿಗೌಡ್ರ ಕಾರ್ಯ ನಿರ್ವಹಿಸಿದರು.

ಉಮೇಶ ಮಲ್ಲಾಪೂರ ಮಾತನಾಡಿ, ತಾಲೂಕಿನಲ್ಲಿ ತಳ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಪಕ್ಷವನ್ನು ಸಂಘಟಿಸಿ ಬಲಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದರು.

ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ಮುಂಬರುವ ಚುನಾವಣೆಗಳಲ್ಲಿ ಆಡಳಿತ ಪಕ್ಷದ ವಿರುದ್ಧವಾಗಿ ಜನರು ಫಲಿತಾಂಶವನ್ನು ನೀಡುವುದು ಖಚಿತ. ಈಗಾಗಲೇ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಮುಂಬರುವ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ, ಬಿ.ಎಂ. ಸಜ್ಜನರ, ಅಶೋಕ ವನ್ನಾಲ, ಶಿವಾನಂದ ಮಠದ, ಶಶಿಮೌಳಿ ಕುಲಕರ್ಣಿ, ರವಿ ಕರಿಗಾರ, ಬೀರಪ್ಪ ಬಂಡಿ, ಹನಮಂತಪ್ಪ ಕಟ್ಟಿಮನಿ, ಈಶಪ್ಪ ರಂಗಪ್ಪನವರ, ಉಮೇಶ ಚನ್ನುಪಾಟೀಲ, ವೆಂಕನಗೌಡ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net