ಉಮೇರಾ ತಬಸ್ಸುಮ್ ಗೆಲುವು

26 DVD 03
ಸಿಂಧನೂರು ನಗರಸಭೆಯ 6ನೇ ವಾರ್ಡ್‌ಗೆ ನೂತನ ಸದಸ್ಯೆಯಾಗಿ ಆಯ್ಕೆಗೊಂಡ ಕಾಂಗ್ರೆಸ್‌ನ ಉಮೇರಾ ತಬಸ್ಸುಮ್ ಅಮಜದ್‌ಖಾನ್‌ಗೆ ತಹಸೀಲ್ದಾರ್ ಅರುಣ್ ದೇಸಾಯಿ ಆಯ್ಕೆ ಪ್ರಮಾಣ ಪತ್ರ ನೀಡಿದರು. ಚುನಾವಣಾಧಿಕಾರಿ ವೀರೇಶ ಗೋನ್ವಾರ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲ್ಲಿಕ್ ವಕೀಲ, ಸಹಾಯಕ ಚುನಾವಣಾಧಿಕಾರಿ ರಾಮದಾಸ ಇತರರಿದ್ದರು.
Published on

ಸಿಂಧನೂರು: ಸ್ಥಳೀಯ ನಗರಸಭೆಯ ವಾರ್ಡ್ ನಂ.6ಕ್ಕೆ ಆಯೋಜಿಸಿದ್ದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇರಾ ತಬಸ್ಸುಮ್ ಅಮಜದ್‌ಖಾನ್ ಗೆಲುವು ಸಾಧಿಸಿದ್ದಾರೆ.

ನ.23 ರಂದು ಚುನಾವಣೆ ನಡೆದಿತ್ತು. ಕಾಂಗ್ರೆಸ್‌ನ ಉಮೇರಾ ತಬಸ್ಸುಮ್ ಅಮಜದ್‌ಖಾನ್ 1,007 ಮತ, ಬಿಜೆಪಿಯ ಕಾವೇರಿ ಅಮರೇಶ 278 ಮತಗಳನ್ನು ಪಡೆದಿದ್ದು ಕಾಂಗ್ರೆಸ್ ಅಭ್ಯರ್ಥಿ ಉಮೇರಾ ತಬಸ್ಸುಮ್ 729 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ ಎಂದು ತಹಸೀಲ್ದಾರ್ ಅರುಣ್ ದೇಸಾಯಿ ಹಾಗೂ ಚುನಾವಣಾಧಿಕಾರಿ ವೀರೇಶ ಗೋನವಾರ ಘೋಷಿಸಿದರು.

ಗ್ರಾಪಂಗೆ ಚುನಾಯಿತ: ತಾಲೂಕಿನ ಗಾಂಧಿನಗರ ಗ್ರಾಪಂಗೆ ಆಯೋಜಿಸಿದ್ದ ಚುನಾವಣೆಯಲ್ಲಿ ಟಿ.ಹನುಮೇಶ 223 ಮತ, ಬಸವರಾಜ ಅಡವಿಬಾವಿ 193 ಮತ ಪಡೆದಿದ್ದು ಟಿ.ಹನುಮೇಶ ವಿಜೇತರಾಗಿದ್ದಾರೆ. ಸಾಲಗುಂದ ಗ್ರಾಪಂಗೆ ನಡೆದ ಚುನಾವಣೆಯಲ್ಲಿ ಬಸಪ್ಪ ಮಾತಾರೆಪ್ಪ 343 ಮತ ಹಾಗೂ ಈರಮ್ಮ ಬಸಣ್ಣ 283 ಮತ ಪಡೆದಿದ್ದು ಬಸಪ್ಪ ಮಾತಾರೆಪ್ಪ ವಿಜೇತರಾಗಿದ್ದಾರೆ ಎಂದು ತಹಸೀಲ್ದಾರ್ ಅರುಣ್ ದೇಸಾಯಿ ತಿಳಿಸಿದರು.

ಸಹಾಯಕ ಚುನಾವಣಾಧಿಕಾರಿ ರಾಮದಾಸ, ಚುನಾವಣಾ ಶಾಖೆಯ ರಾಜಾಭಕ್ಷಿ, ಎಣಿಕೆ ಮೇಲ್ವಿಚಾರಕರಾಗಿ ಕಂದಾಯ ಇಲಾಖೆಯ ಉಪ ತಹಸೀಲ್ದಾರ್ ಎಚ್.ಎಸ್.ಮಿಶ್ರೀಕೋಟಿ, ಎಣಿಕೆ ಸಹಾಯಕರಾದ ಹನುಮೇಶ, ಮಲ್ಲಿಕಾರ್ಜುನ ಕಾರ್ಯನಿರ್ವಹಿಸಿದರು.

ಬಂದೋಬಸ್ತ್: ಶಹರ ಪೊಲೀಸ್ ಠಾಣೆಯ ಪಿ.ಎಸ್.ಐ ಬಸವರಾಜ ನೇತೃತ್ವದಲ್ಲಿ ಹೆಡ್ ಕಾನ್ಸ್‌ಟೇಬಲ್ ಸೋಮನಗೌಡ, ಪೇದೆಗಳಾದ ಮಂಜುನಾಥ, ಉಪೇಂದ್ರ, ಅಮರೇಶ ತಹಸೀಲ್ದಾರ್ ಕಚೇರಿಯ ಮತ ಎಣಿಕೆ ಕೇಂದ್ರಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net