ಬನ್ನೇರುಘಟ್ಟದಲ್ಲಿನ್ನು ಛತ್ರಿ ಕಡ್ಡಾಯ!, ಜೈವಿಕ ಉದ್ಯಾನದಲ್ಲಿ ಬರಲಿದೆ ಹೊಸ ನಿಯಮ

sumi
Published on

ಶಿವರಾಜ ಎಂ. ಬೆಂಗಳೂರು

ಲಾಕ್‌ಡೌನ್ ತೆರವಾದ ಬಳಿಕ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಕಡ್ಡಾಯವಾಗಿ ಇಲಾಖೆ ನೀಡುವ ಛತ್ರಿಗಳನ್ನು ಬಳಸಲೇಬೇಕಿದೆ.

ಉದ್ಯಾನದ ಭೇಟಿಗೂ ಛತ್ರಿಗೂ ಏನು ಸಂಬಂಧ ಎನ್ನುವಂತಿಲ್ಲ. ಇದು ಕರೊನಾ ಎೆಕ್ಟ್. ಪ್ರವಾಸಿಗರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಛತ್ರಿಗಳನ್ನೇ ಪ್ರಮುಖ ಅಸವನ್ನಾಗಿ ಬಳಸುವ ಚಿಂತನೆ ನಡೆದಿದ್ದು, ಶೀಘ್ರವೇ ಜಾರಿಯಾಗಲಿದೆ.

ವಿಸ್ತಾರವಾದ ಛತ್ರಿಗಳನ್ನು ಬಳಸದವರಿಗೆ ಪ್ರವೇಶ ನಿರಾಕರಿಸಲಾಗುತ್ತದೆ. ಪ್ರವೇಶ ದ್ವಾರದಲ್ಲಿ ಛತ್ರಿ ಪಡೆದು, ಹೊರಹೋಗುವ ದ್ವಾರದಲ್ಲಿ ಮರಳಿಸಬೇಕು. ಛತ್ರಿಯನ್ನು ಮತ್ತೊಬ್ಬರಿಗೆ ಕೊಡುವಾಗ ಸ್ಯಾನಿಟೈಸರ್ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಕರೊನಾ ಮುಂಜಾಗ್ರತೆಯೊಂದಿಗೆ ಮತ್ತಷ್ಟು ನಿಯಮ ರೂಪಿಸಲು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

ಸಾಮಾಜಿಕ ಅಂತರಕ್ಕೆ ಪೂರಕ: ಈ ಹಿಂದೆ ಪ್ರವಾಸಿಗರಿಗೆ ಮಳೆ ಅಥವಾ ಬಿಸಿಲಿನಿಂದ ರಕ್ಷಣೆ ಪಡೆಯಲು ಇಲಾಖೆ 500 ರೂಪಾಯಿ ಡೆಪಾಸಿಟ್ ಪಡೆದು ಛತ್ರಿಗಳನ್ನು ವಿತರಿಸುತ್ತಿತ್ತು. ಇದು ಕಡ್ಡಾಯವಾಗಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಛತ್ರಿ ಬಳಕೆ ಕಡ್ಡಾಯ. ಆದರೆ ಇದಕ್ಕೆ ಡೆಪಾಸಿಟ್ ಇಡಬೇಕಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಛತ್ರಿಗಳನ್ನು ಬಳಸುವುದರಿಂದ ಗುಂಪುಗೂಡಲು ಅವಕಾಶವಿರುವುದಿಲ್ಲ. ಇದರಿಂದ ಸಾಮಾಜಿಕ ಅಂತರವೂ ತಾನಾಗಿಯೇ ಉಂಟಾಗುತ್ತದೆ ಎಂಬುದು ಅಧಿಕಾರಿಗಳ ಚಿಂತನೆಯಾಗಿದೆ. ಲಾಕ್‌ಡೌನ್ ಸಡಿಲವಾದರೂ ಕರೊನಾ ವೈರಸ್ ಹಾವಳಿ ಕಡೆಗಣಿಸುವಂತಿಲ್ಲ. ಹೀಗಾಗಿ ಈ ಕ್ರಮ.

ಆನ್‌ಲೈನ್ ಟಿಕೆಟ್ ಕಡ್ಡಾಯ: ಜೈವಿಕ ಉದ್ಯಾನಕ್ಕೆ ಭೇಟಿ ನೀಡಲು ಇನ್ನು ಮುಂದೆ ಸಂಪೂರ್ಣ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿದ್ದರೂ ಕೌಂಟರ್‌ಗಳಲ್ಲಿ ಟಿಕೆಟ್ ಖರೀದಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಟಿಕೆಟ್ ಕೌಂಟರ್‌ಗಳಲ್ಲಿ ಗುಂಪುಗೂಡುವುದನ್ನು ತಪ್ಪಿಸಲು ಆನ್‌ಲೈನ್ ಟಿಕೆಟ್ ಕಡ್ಡಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೀವರ್ ಸ್ಕಾೃನಿಂಗ್ ಕಡ್ಡಾಯ: ಪ್ರವಾಸಿಗರನ್ನು ಪ್ರಾಥಮಿಕವಾಗಿ ಫೀವರ್ ಸ್ಕಾೃನಿಂಗ್‌ಗೆ ಒಳಪಡಿಸಲಾಗುವುದು. ಪ್ರತಿಯೊಬ್ಬರಿಗೂ ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸರ್ ನೀಡುವ ಜತೆಗೆ ಮಾಸ್ಕ್ ಧರಿಸದವರಿಗೆ ವಿತರಿಸುವ ಕುರಿತೂ ಅಧಿಕಾರಿಗಳು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಕರೊನಾ ನಿಯಂತ್ರಣಕ್ಕೆ ಬಂದ ಬಳಿಕ ಪ್ರವಾಸಿಗರ ಭೇಟಿ ಆಧರಿಸಿ ಮತ್ತಷ್ಟು ಕ್ರಮಗಳನ್ನು ರೂಪಿಸುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಪ್ರವಾಸಿಗರ ಭೇಟಿಗೆ ಅಧಿಕೃತ ಅನುಮತಿ ದೊರೆತ ಬಳಿಕ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕೆಲವೊಂದು ನಿಯಮಗಳನ್ನು ರೂಪಿಸಲಾಗುತ್ತಿದೆ. ಅದರಲ್ಲಿ ಛತ್ರಿ ಬಳಕೆ ಪ್ರಮುಖವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಛತ್ರಿ ಅಗತ್ಯ ಎನಿಸಿದೆ. ವನಶ್ರೀ ವಿಪಿನ್‌ಸಿಂಗ್, ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ಮಳೆ, ಬಿಸಿಲಿನ ರಕ್ಷಣೆಗಾಗಿ ಪ್ರವಾಸಿಗರಿಗಾಗಿ ಛತ್ರಿಗಳನ್ನು ಕೊಡಲಾಗುತ್ತಿತ್ತು. ಈಗ ಅದನ್ನೇ ಕಡ್ಡಾಯಗೊಳಿಸುವ ಚಿಂತನೆ ಇದೆ. ಈ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ಕರೊನಾ ತಡೆಗೆ ಅಸವನ್ನಾಗಿ ಬಳಸಲಾಗುವುದು. ಕುಶಾಲಪ್ಪ, ಜೈವಿಕ ಉದ್ಯಾನದ ಸಹಾಯಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net