

ಮುಳಬಾಗಿಲು: ತಾಲೂಕಿನ ಅಂಬ್ಲಿಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ಚನಾವಣೆಗೆ ಕೋಲಾರ ಚುನಾವಣಾಧಿಕಾರಿ, ಸಹಕಾರ ಸಂಘಗಳ ಉಪನಿಬಂಧಕ ಕಿಶೋರ್ ಕುಮಾರ್ ಜೋಶಿ ತಡೆ ನೀಡಿದ್ದಾರೆ.
ಸಹಕಾರ ಸಂಘದಲ್ಲಿ 155 ಸದಸ್ಯರಿದ್ದು, ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960ರ ನಿಯಮ 13ರಡಿ ಮತದಾರರ ಪಟ್ಟಿ ತಯಾರಿಸುವ ಮುನ್ನ ಸದಸ್ಯರಿಗೆ ಚರ್ಚಿಸಲು ಅವಕಾಶ ನೀಡದೆ ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಶಾಸಕ ಸಮೃದ್ಧಿ ವಿ. ಮಂಜುನಾಥ್ ನೇತೃತ್ವದಲ್ಲಿ ಜೆಡಿಎಸ್ ನಿಯೋಗ ಸೋಮವಾರ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದರು. ಈ ಮೇರೆಗೆ ತಡೆ ನೀಡಿದ್ದಾರೆ.
ಸಮೃದ್ಧಿ ಮಂಜುನಾಥ ಮಾತನಾಡಿ, ಶ್ರೀನಿವಾಸಪುರ ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿ ಅಬೀದ್ ಹುಸೇನ್ ರಿಟರ್ನಿಂಗ್ ಅಧಿಕಾರಿಯಾಗಿ ನೇಮಕಗೊಂಡು ಏ-.22ರಂದು ಕರಡು ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಈ ಪ್ರತಿ ಲಗತ್ತಿಸಿ ದೂರು ನೀಡಲಾಗಿದ್ದು, ಎಲ್ಲ ಅಂಶಗಳನ್ನು ಪರಿಶೀಲಿಸಿ ದಾಖಲಾತಿಗಳೊಂದಿಗೆ ಹೋಲಿಸಿದಾಗ ಅನರ್ಹ ಮತದಾರರಿಗೆ ಅಹವಾಲು ಹೇಳಿಕೊಳ್ಳಲು ಅವಕಾಶ ನೀಡದೆ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದ್ದರಿಂದ ಕೂಡಲೇ ಚುನಾವಣಾ ಪ್ರಕ್ರಿಯೆ ಮುಂದಿನ ಆದೇಶದವರೆಗೂ ತಡೆಹಿಡಿಯಬೇಕು ಎಂದು ಒತ್ತಾಯಿಸಲಾಗಿತ್ತು. ದೂರು ಆಧರಿಸಿ ಕ್ರಮ ಕೈಗೊಂಡಿದ್ದಾರೆ ಎಂದರು. ಸಂಘದ ಸದಸ್ಯ ತಿಮ್ಮರಾಯಪ್ಪ ಇದ್ದರು.
ಯುದ್ಧ ಆಗಲೇಬೇಕು
ಪಾಕಿಸ್ತಾನದಲ್ಲಿ ಡಾಕ್ಟರೇಟ್ ಪದವಿ ಕೊಟ್ಟರೆ ಅದು ನಮ್ಮ ಸಿದ್ದರಾಮಯ್ಯನವರಿಗೆ ಮಾತ್ರ ಕೊಡುತ್ತಾರೆ. ಒಂದು ಜಾತಿ ಒಲೈಕೆ ಮಾಡಿಕೊಳ್ಳುವುದು ವೊಟಿಂಗ್ ್ಯಾಕ್ಟ್. ಈ ರಾಜಕಾರಣಿಗಳಿಗೆ ಬುದ್ಧಿ ಬರಲ್ಲ. ಈ ರೀತಿಯ ಟನೆಗಳು ಮರುಕಳಿಸಬಾರದು ಎಂದರೆ ಯುದ್ಧ ನಡೆಯಲೇಬೇಕು, ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಲೇಬೇಕು ಎಂದು ಸಮೃದ್ಧಿ ಮಂಜುನಾಥ್ ತಿಳಿಸಿದರು.
ರಾಜಕಾರಣ ಬಿಟ್ಟು ಬೇರೇನೂ ಗೊತ್ತಿಲ್ಲ
ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ನರಮೇಧ ನಡೆಯುತ್ತಿದೆ. ಅದರ ಬಗ್ಗೆ ಚಿಂತೆ ಇಲ್ಲ. ಬದುಕು ಬೇಕು ಎಂಬ ಚಿಂತೆ ಇಲ್ಲ, ರಾಜಕಾರಣ ಬಿಟ್ಟರೆ ಕಾಂಗ್ರೆಸ್ನವರಿಗೆ ಬೇರೆ ಗತಿ ಇಲ್ಲ. ಶಾಸಕರ ಪತ್ನಿ, ಸಚಿವರ ಪತ್ನಿ, ಮಕ್ಕಳು ಸತ್ತಿದ್ದರೆ ಅವರಿಗೆ ಅರ್ಥವಾಗುತ್ತಿತ್ತು ಎಂದು ಶಾಸಕ ಸಮೃದ್ಧಿ ಮಂಜುನಾಥ್ ಕಾಂಗ್ರೆಸಿಗರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಡೆಲಿಗೇಟ್
ಮುಳಬಾಗಿಲು ತಾಲೂಕು ಅಂಬ್ಲಿಕಲ್ ಗ್ರಾಮದ ಸಹಕಾರ ಸಂದಿಂದ ಅಕ್ರಮವಾಗಿ ಚುನಾವಣಾ ಪ್ರಕ್ರಿಯೆ ನಡೆಸಿ ಡಿಸಿಸಿ ಬ್ಯಾಂಕಿಗೆ ಡೆಲಿಗೇಟ್ ಮಾಡಲಾಗಿದೆ. ಕಾಂಗ್ರೆಸ್ ನಾಯಕರ ಅಣತಿಯಂತೆ ಸಹಕಾರ ಇಲಾಖೆಯ ಅಧಿಕಾರಿಗಳು ನಡೆದುಕೊಂಡಿದ್ದಾರೆ ಎಂದು ಸಮೃದ್ಧಿ ಮಂಜುನಾಥ್ ಆರೋಪಿಸಿದರು. ಚುನಾವಣಾ ಸೂಚನಾ ಪತ್ರ ತಲುಪುವುದಕ್ಕೆ ಮುನ್ನವೇ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ. ಜೆಡಿಎಸ್ ಪ್ರಾಬಲ್ಯ ಇರುವ ಕಡೆ ಕಾಂಗ್ರೆಸ್ ಮುಖಂಡರು ಈ ಕೆಲಸವನ್ನು ಅಧಿಕಾರಿಗಳ ಮೂಲಕ ಮಾಡಿಸಿದ್ದಾರೆ ಎಂದರು.