ಉಮಾಪತಿ ಭಟ್ಟರಿಗೆ ಕಿಲೋಸ್ಕರ್ ವಸುಂಧರಾ ಸನ್ಮಾನ ಪರಿಸರ ಪ್ರಶಸ್ತಿ

sirsi umapati bhat
Published on

ಶಿರಸಿ: ಕಳೆದ 25 ವರ್ಷಗಳಿಂದ ಪರಿಸರ ಕೇತ್ರದಲ್ಲಿ ಸೇವೆ ಮಾಡುತ್ತಿರುವ ಯೂತ್ ಫಾರ್ ಸೇವಾ ಸಂಸ್ಥೆಯ ಪರಿಸರ ವಿಭಾಗದ ರಾಜ್ಯ ಸಂಯೋಜಕ ಉಮಾಪತಿ ಭಟ್ ಕೆವಿ ಪರಿಸರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಪ್ರತಿಷ್ಠಿತ ಕಿರ್ಲೆಸ್ಕರ್ ವಸುಂಧರಾ ಸನ್ಮಾನ ಪರಿಸರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಏ. 22ರಂದು ಕೊಪ್ಪಳದಲ್ಲಿ ನಡೆಯುವ ವಸುಂಧರಾ ಚಲನಚಿತ್ರೋತ್ಸವದ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕಾರ ನಡೆಯಲಿದೆ. ಯುವಕರಿಗಾಗಿ ಪರಿಸರ ಪ್ರಶಿಕ್ಷಣ ಮಕ್ಕಳಗಾಗಿ ಹಸಿರು ಪಯಣ ನಿಸರ್ಗ ಜ್ಞಾನ ಶಿಕ್ಷಣ, ಟೆರಸ್ ಗಾರ್ಡನ್ ತರಬೇತಿ, ಪಕ್ಷಿವೀಕ್ಷಣಾ ತರಬೇತಿ, ಜೀವವೈವಿಧ್ಯ ತರಬೇತಿ, ಹಸಿರು ಆಹಾರ ಹಸಿರು ಆರೋಗ್ಯ ತರಬೇತಿ, ಮನೆಮದ್ದು ತರಬೇತಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

140 ಕಡೆಗಳಲ್ಲಿ ನವಗ್ರಹ ವನ, ಮತ್ತು ಸಂಗೀತ ಸ್ವರವನ, ತೀರ್ಥಂಕರರ ವನ, ಕುಟುಂಬ ವನ, ಅಶೋಕ ವನ, ಅಕ್ಷರ, ವನ, ಶ್ರೀ ಮಾರಿಕಾಂಬಾ ವನ ನಿರ್ಮಾಣ ಮಾಡಿದ ಸಾಧನೆ ಅವರದು. ವಿಶೇಷವಾಗಿ ಚೌಗು ಭೂಮಿ ಉಳಿಸಿ ಆಂದೋಲನದಲ್ಲಿ ನಡೆಸಿ ನೂತನ ಚೌಗುಭೂಮಿ, ದೇವರಕಾಡು ನಿರ್ವಣಕಾರ್ಯ ಮಾಡಿದ್ದಾರೆ. ಈ ಎಲ್ಲವನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net