

ಮಂಡ್ಯ: ಕರ್ನಾಟಕ ನಾಟಕ ಪ್ರಶಸ್ತಿಗೆ ಮದ್ದೂರು ತಾಲೂಕಿನ ಹಳ್ಳಿಕೆರೆ ಗ್ರಾಮದ ಎಚ್.ಪಿ.ಈಶ್ವರಚಾರಿ ಅವರನ್ನು ಆಯ್ಕೆ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಮಾಮಹೇಶ್ವರಿ ಕಲಾ ಅಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಎಂ.ಸಿದ್ದರಾಜು, 2025-26ನೇ ಸಾಲಿನ ಕರ್ನಾಟಕ ನಾಟಕ ಪ್ರಶಸ್ತಿಗೆ ನಮ್ಮ ಸಂಘದ ಸದಸ್ಯ ಹಾಗೂ ಜಿಲ್ಲೆಯ ರಂಗಭೂಮಿ ಕಲಾವಿದ ಈಶ್ವರಚಾರಿ ಅವರನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದರು.
ಈಶ್ವರಚಾರಿ ಅವರು 2007ರಿಂದ ಇಲ್ಲಿಯವರೆಗೆ ತಮ್ಮ ರಂಗಭೂಮಿ ಕಲೆಗೆ 18ಕ್ಕೂ ಹೆಚ್ಚು ಪ್ರಶಸ್ತಿ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆ ಮಾಡಿದ ರಾಜ್ಯಸರ್ಕಾರಕ್ಕೆ ಧನ್ಯವಾದ ತಿಳಿಸಲಾಗುವುದು ಎಂದು ಹೇಳಿದರು.
ಜಿ.ಸಿ.ಮಾದೇಗೌಡ, ನಂಜುಂಡೇಗೌಡ, ಸುದರ್ಶನ್, ಮಹೇಶ್ ಇದ್ದರು.