ನಿಯಮಬಾಹಿರ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಆಕ್ರೋಶ

8SND-08
ಶಾಲೆಯ ಕಾಂಪೌಂಡ್ ನಿರ್ಮಾಣ ಕಾಮಗಾರಿ ನಿಯಮಬಾಹಿರವಾಗಿದ್ದು, ಕ್ರಮಕ್ಕೆ ಆಗ್ರಹಿಸಿ ವೀರಾಪುರ ಗ್ರಾಮಸ್ಥರು ಸಿಂಧನೂರ ತಾಪಂ ಎಡಿ ಮನೋಹರಗೆ ಮಂಗಳವಾರ ಮನವಿ ಸಲ್ಲಿಸಿದರು. ಗ್ರಾಮಸ್ಥರಾದ ಶಿವರಾಯಪ್ಪ ಮ್ಯಾದರಾಳ, ಮಾರುತಿ, ಸಣ್ಣ ಶ್ಯಾಮಣ್ಣ ಇದ್ದರು.
Published on

ಸಿಂಧನೂರು: ಶಾಲೆಯ ಕಾಂಪೌಂಡ್ ನಿರ್ಮಾಣ ಕಾಮಗಾರಿ ನಿಯಮಬಾಹಿರವಾಗಿದ್ದು, ಕ್ರಮಕ್ಕೆ ಆಗ್ರಹಿಸಿ ವೀರಾಪುರ ಗ್ರಾಮಸ್ಥರು ನಗರದ ತಾಪಂ ಎಡಿ ಮನೋಹರಗೆ ಮಂಗಳವಾರ ಮನವಿ ಸಲ್ಲಿಸಿದರು.


ಉಮಲೂಟಿ ಗ್ರಾಪಂ ವ್ಯಾಪ್ತಿಯ ವೀರಾಪುರ ಸಹಿಪ್ರಾ ಶಾಲಾ ಕಾಂಪೌಂಡ್ ನಿರ್ಮಾಣ ಕಾಮಗಾರಿಯನ್ನು ನರೇಗಾದಡಿಯಲ್ಲಿ ಮಾಡಲಾಗಿದೆ. ಈ ಹಿಂದಿನ ಕಾಂಪೌಂಡ್ ಗುಣಮಟ್ಟದಿಂದ ಕೂಡಿದ್ದರು ನೆಲಸಮಗೊಳಿಸಲಾಗಿದೆ. ಅಲ್ಲದೆ ಕಾಂಪೌಂಡ್ ನೆಲಸಮಗೊಳಿಸಲು ಲೋಕೋಪಯೋಗಿ ಇಲಾಖೆ, ಶಿಕ್ಷಣಾಧಿಕಾರಿಗಳ ಅನುಮತಿ ಪಡೆದಿಲ್ಲ. ಮುಖ್ಯಶಿಕ್ಷಕ, ಗ್ರಾಪಂ ಅಭಿವೃದ್ಧಿ ಅಧಿಕಾರಿ, ಇಂಜಿನಿಯರ್ ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ. ಗ್ರಾಮದಲ್ಲಿ ಅಂದಾಜು ಪತ್ರಿಕೆಯಂತೆ ಕೆಲಸ ನಡೆಯುತ್ತಿಲ್ಲ. ಕಾಮಗಾರಿ ಸ್ಥಳದಲ್ಲಿ ನಾಮಫಲಕವೇ ಹಾಕಿಲ್ಲ.ಅಲ್ಲದೆ ಪಾರದರ್ಶಕ ಕಾಪಾಡುತ್ತಿಲ್ಲ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ಗ್ರಾಮಸ್ಥರಾದ ಶಿವರಾಯಪ್ಪ ಮ್ಯಾದರಾಳ, ಮಾರುತಿ, ಸಣ್ಣ ಶ್ಯಾಮಣ್ಣ, ದುರುಗಪ್ಪ, ಹನುಮಪ್ಪ, ನಾಗಪ್ಪ, ಶ್ಯಾಮಪ್ಪ, ಹನುಮಂತ, ಕಂಟೆಪ್ಪ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net