ಬಾಲಗಾಂವ ಗುರುದೇವಾಶ್ರಮಕ್ಕೆ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಆಗಮನ

Gurudevashram
Published on

ಉಮದಿ: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಇಂಡಿ ತಾಲೂಕಿನ ಕಾತ್ರಾಳ ಹಾಗೂ ಜತ್ ತಾಲೂಕಿನ ಬಾಲಗಾಂವ ಗುರುದೇವ ಆಶ್ರಮಕ್ಕೆ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸಾಮೀಜಿ ಆಗಮಿಸಿ ಒಂದು ತಿಂಗಳವರೆಗೂ ಇಲ್ಲೇ ವಾಸ್ತವ್ಯ ಮಾಡಲಿದ್ದಾರೆ ಎಂದು ಗುರುದೇವಾಶ್ರಮದ ಶ್ರೀ ಅಮೃತಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಶ್ರೀಗಳು ಇಲ್ಲಿಗೆ ಆಗಮಿಸಬೇಕೆನ್ನುವುದು ಜತ್ತ ಹಾಗೂ ಇಂಡಿ ತಾಲೂಕಿನ ನೂರಾರು ಗ್ರಾಮಗಳ ಗ್ರಾಮಸ್ಥರ ಬಹುದಿನದ ಆಸೆಯಾಗಿತ್ತು. ದಶಕಗಳಿಂದ ಹಲವು ಭಾರಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಗೆ ಕರೆ ತರುವುದ್ಕಕಾಗಿ ಈ ಭಾಗದ ಜನರು ಪ್ರಯತ್ನಿಸಿದರೂ ಕಾಲ ಕೂಡಿ ಬಂದಿರಲಿಲ್ಲ. ಈಗ ಶ್ರೀ ಸಿದ್ಧೇಶ್ವರ ಸಾಮೀಜಿ ಇಲ್ಲಿಗೆ ಆಗಮಿಸುತ್ತಿರುವುದು ಇಲ್ಲಿನ ಜನತೆಗೆ ಸಂತಸ ತಂದಿದೆ.
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ವಾಸ್ತವ್ಯದ ಕಾಲದಲ್ಲಿ ನಿತ್ಯ ಸ್ವಾಮೀಜಿಯವರ ದರ್ಶನ ಹಾಗೂ ವಿವಿಧ ವಿಷಯಗಳ ಕುರಿತು ‘ಚಿಂತನ ಮಂಥನ’ ಕಾರ್ಯಕ್ರಮ ನಡೆಯಲಿದೆ. ಇದರಿಂದ ಈ ಭಾಗದ ಜನರಲ್ಲಿರುವ ಅನೇಕ ವಿಷಯಗಳ ಬಗ್ಗೆ ಅರಿವು ಹಾಗೂ ಜ್ಞಾನ ವೃದ್ಧಿಯಾಗಲಿದೆ. ಇದರೊಂದಿಗೆ ಈ ಭಾಗದಲ್ಲಿನ ಜನರ ಸಮಸ್ಯಗಳಿಗೂ ಸ್ಪಂದನೆ ಸಿಗುವ ಸಾಧ್ಯತೆ ಇದೆ ಎಂದು ಅಮೃತಾನಂದ ಸ್ವಾಮೀಜಿ ತಿಳಿಸಿದರು.

ಭರದ ಸಿದ್ಧತೆ

ಕಾತ್ರಾಳ- ಬಾಲಗಾವ ಗುರದೇವಾಶ್ರಮ ನಿರ್ಮಾಣವಾದಾಗಿನಿಂದ ಕೇವಲ ಕಾರ್ಯಕ್ರಮದ ನಿಮಿತ್ತವಾಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಇಲ್ಲಿಗೆ ಆಗಮಿಸಿದ್ದರು. ಈಗ ಇಲ್ಲಿಗೆ ವಾಸ್ತವ್ಯಕ್ಕಾಗಿ ಆಗಮಿಸುತ್ತಿರುವುದರಿಂದ ಆಶ್ರಮಕ್ಕೆ ಬಣ್ಣ ಹಚ್ಚುವುದು ಸೇರಿ ಇನ್ನಿತರ ಕಾರ್ಯಗಳು ಭರದಿಂದ ಸಾಗಿವೆ. ಅಲ್ಲದೆ, ಆಶ್ರಮಕ್ಕೆ ಸಂಪರ್ಕ ಕಲ್ಪ್ಪಿಸುವ ರಸ್ತೆಗಳಾದ ಬೋರ್ಗಿ- ಆಶ್ರಮ, ಕಾತ್ರಾಳ- ಆಶ್ರಮ, ಬಾಲಗಾವ- ಆಶ್ರಮ ಹಾಗೂ ಆಕಳವಾಡಿ ‘ಆಶ್ರಮ ಈ ಎಲ್ಲ ರಸ್ತೆಗಳಿಗೆ ಕೆಂಪು ಗರಸು ಹಾಕಿ ರಸ್ತೆಗಳನ್ನು ಬದಿಯ ಮುಳ್ಳುಕಂಟಿಗಳನ್ನು ತೆರುವುಗೊಳಿಸಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ದರ್ಶನಕ್ಕೆ ಆಗಮಿಸುವವರಿಗೆ ಅನುವು ಮಾಡಿಕೊಡಲಾಗಿದೆಯಲ್ಲದೆ, ಆಶ್ರಮದಲ್ಲಿ ಭವ್ಯವಾದ ಮಂಟಪ ಹಾಕಲಾಗಿದೆ.

ಮಹಾಪ್ರಸಾದ ವ್ಯವಸ್ಥೆ

ಒಂದು ತಿಂಗಳವರೆಗೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಆಶ್ರಮದಲ್ಲಿ ವಾಸ್ತವ್ಯ ಮಾಡುವುದರಿಂದ ಈ ವೇಳೆ ಗುರುದೇವಾಶ್ರಮದ ಸುತ್ತಮುತ್ತಲಿನ ಪರಿಸರದ ಅಂದಾಜು 30 ಗ್ರಾಮಗಳ ವತಿಯಿಂದ ನಿತ್ಯ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಅಮೃತಾನಂದ ಸ್ವಾಮೀಜಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net