

ಪಿರಿಯಾಪಟ್ಟಣ: ತಾಲೂಕು ಮಾಲಂಗಿ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಉಮಾದೇವಿ ಮತ್ತು ಉಪಾಧ್ಯಕ್ಷೆಯಾಗಿ ಭಾನುಮತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾಲಂಗಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಗೆ ಶನಿವಾರ ಚುನಾವಣೆ ನಿಗದಿಯಾಗಿತ್ತು. ಉಮಾದೇವಿ ಮತ್ತು ಭಾನುಮತಿ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ಘೋಷಿಸಿದರು.
ಈ ಸಂದರ್ಭದಲ್ಲಿ ಮಾಲಂಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಡಾ.ಎಂ.ಜಿ.ಆಶಾ, ಸದಸ್ಯರಾದ ಎಂ.ಎಸ್.ರವಿ, ಪುಟ್ಟರಾಜು, ಮಾದಯ್ಯ, ಅಭಿಲಾಷ, ವಸಂತ, ಸಯಿದಾಭಾನು, ಯಾಸ್ಮಿನ್ ತಾಜ್, ಕಮಲಮ್ಮ, ಸಯ್ಯದ್ ನಯಾಜ್, ಮುಖಂಡರಾದ ಶ್ರೀನಿವಾಸ್, ಸುರೇಶ್ ಇತರರು ಇದ್ದರು.