ಮೈಸೂರಿನಲ್ಲಿ ಗಮನ ಸೆಳೆದ ವಿಂಟೇಜ್ ಕಾರು, ಬೈಕ್‌ಗಳ ರ್ಯಾಲಿ

18
Published on

ಮೈಸೂರು: ನಾಡಹಬ್ಬದ ಅಂಗವಾಗಿ ಎಂಜಿಎಸ್‌ನಿಂದ ಶುಕ್ರವಾರ ಆಯೋಜಿಸಿದ್ದ ದಿ ಮೈಸೂರು ದಸರಾ ವಿಂಟೇಜ್ ಕಾರು, ಬೈಕುಗಳ ಪ್ರದರ್ಶನ ಮತ್ತು ರ‌್ಯಾಲಿ ಎಲ್ಲರ ಕಣ್ಮನ ಸೆಳೆಯಿತು.
ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ನಡೆದ ಪ್ರದರ್ಶನದಲಲ್ಲಿ ನೂರು ವರ್ಷ ಪೂರೈಸಿದ ವಿಭಿನ್ನ, ವಿಶೇಷ ಮಾದರಿಯ ಕಾರುಗಳು, ದ್ವಿಚಕ್ರವಾಹನಗಳನ್ನು ಮನಸೂರೆಗೊಂಡವು.
ಹಳೆಯ ಮಾದರಿ ಕಾರುಗಳನ್ನು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವುದರ ಜತೆಗೆ ಅವುಗಳ ಬಣ್ಣವೂ ಮಾಸದಂತೆ ಜೋಪಾನ ಮಾಡಿಕೊಂಡು ಬಂದಿರುವ ಎಂ.ಜಿ.ಎಸ್., ನಾಡಹಬ್ಬ ದಸರಾ ಪ್ರಯುಕ್ತ ತಮ್ಮ ಸಂಗ್ರಹದಲ್ಲಿರುವ ವಿಂಟೇಜ್ ಕಾರ್‌ಗಳು ಹಾಗೂ ದ್ವಿಚಕ್ರ ವಾಹನಗಳನ್ನು ಪ್ರದರ್ಶಿಸಿದರಲ್ಲದೆ, ಅವುಗಳ ರ‌್ಯಾಲಿ ಕೂಡ ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
ರ‌್ಯಾಲಿಯಲ್ಲಿ 1909ರಲ್ಲಿ ತಯಾರಾದ ಫೋರ್ಡ್ ಕಾರು, 1935ರಲ್ಲಿ ಬ್ರಿಟಿಷರು ತಯಾರಿಸಿ ಬಳಸುತ್ತಿದ್ದ ಮಾಸ್ಟರ್‌ಫೀಸ್ ಕಾರು ಎಂದು ಕರೆಯುವ ರೋಲ್ಸ್ ರಾಯ್, 1948ರ ಹಿಂದೂಸ್ತಾನ್-10, ಅಂಬಾಸಿಡರ್, 1932ರ ತಯಾರಾದ ಬುಲ್ಕ್ ರೋಡ್ ಮಾಸ್ಟರ್ ಕಾರು, 1960ರಲ್ಲಿ ರೋಡಿಗಿಳಿದಿದ್ದ ವಿಲ್ಲಿ ಜೀಪ್, 1930ರಲ್ಲಿ ತಯಾರಾಗಿದ್ದ ಕಾಡ್ಲಿಕ್, 1964ರ ಕಿಂಗ್ಸ್ವೇ ಕಾರು, 1955ರ ಮಿರರ್ ಮೈನರ್, 1930ರ ಡಿಸ್ಟೋ ಕಾರು ಹೀಗೆ ಹಲವಾರು ಗತಕಾಲ ಇತಿಹಾಸ ಹೇಳಿದಂತಿದ್ದವು.
ಸಂಸದ ಪ್ರತಾಪ್‌ಸಿಂಹ, ಶಾಸಕ ಟಿ.ಎಸ್.ಶ್ರೀವತ್ಸ, ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net