ಉಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

7-ANP-P1
ಆನಂದಪುರ ಸಮೀಪದ ಉಳ್ಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಲಯದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಜಯಿಸಿರುವುದು. ವಿನಾಯಕ, ರಾಜ ಗೋಪಾಲ, ಚಂದ್ರಕಲಾ ವಿ.ಶೇಟ್, ಪಾರ್ವತಮ್ಮ, ಶಿಕ್ಷಕರು ಇದ್ದಾರೆ.
Published on

ಆನಂದಪುರ: ಸಮೀಪದ ಉಳ್ಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉಳ್ಳೂರು ವಲಯದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ಸಮಗ್ರ ಪ್ರಶಸ್ತಿ ಜಯಿಸಿದ್ದಾರೆ. ಶಾಲೆಯ ಬಾಲಕಿಯರು ಥ್ರೋ ಬಾಲ್, ವಾಲಿಬಾಲ್, ಎತ್ತರ ಜಿಗಿತ, ಉದ್ದ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಖೋಖೋ, ಗುಂಡು ಎಸೆತ, ತಟ್ಟೆ ಎಸೆತ, 600 ಮೀಟರ್ ಓಟ, ರಿಲೇ, ಉದ್ದ ಜಿಗಿತ, ಎತ್ತರ ಜಿಗಿತ, ದ್ವಿತೀಯ ಸ್ಥಾನ ಮತ್ತು 100 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಬಾಲಕರು ಥ್ರೋಬಾಲ್ ಪ್ರಥಮ, ಗುಂಡು ಎಸೆತ ಮತ್ತು ಖೋಖೋ ದ್ವಿತೀಯ, 100 ಮೀಟರ್ ಓಟ ಮತ್ತು ರಿಲೇಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವಿನಾಯಕ, ಶಿಕ್ಷಣ ತಜ್ಞ ರಾಜ ಗೋಪಾಲ, ಮುಖ್ಯ ಶಿಕ್ಷಕಿ ಚಂದ್ರಕಲಾ ವಿ.ಶೇಟ್, ದೈಹಿಕ ಶಿಕ್ಷಕಿ ಪಾರ್ವತಮ್ಮ ಹಾಗೂ ಶಿಕ್ಷಕರು ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net