ಗ್ರಾಪಂ ಅಧ್ಯಕ್ಷರಾಗಿ ಉಲ್ಲಾಸ್ ಅವಿರೋಧ ಆಯ್ಕೆ

18-GPT-2
ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಆರ್.ಉಲ್ಲಾಸ್ ಅವರನ್ನು ಸದಸ್ಯರು ಹಾಗೂ ಮುಖಂಡರು ಅಭಿನಂದಿಸಿದರು.
Published on

ಗುಂಡ್ಲುಪೇಟೆ: ತಾಲೂಕಿನ ರಾಘವಾಪುರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಡಿ.ಆರ್.ಉಲ್ಲಾಸ್ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಉಲ್ಲಾಸ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಅಕ್ಷಯ್ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ಈ ವೇಳೆ ಉಪಾಧ್ಯಕ್ಷೆ ಸಾವಿತ್ರಮ್ಮ, ಸದಸ್ಯರಾದ ಮಹದೇವಪ್ಪ, ಸುಧಾರಾಣಿ, ಗೋವಿಂದರಾಜು, ಪಲ್ಲವಿ, ಚಿಕ್ಕಶಾಂತಿ, ತಿಬ್ಬಯ್ಯ, ರತ್ನಮ್ಮ, ಗೋವಿಂದರಾಜು, ಅಭಿವೃದ್ಧಿ ಅಧಿಕಾರಿ ರವಿ, ಮುಖಂಡ ಶ್ರೀನಿವಾಸಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net