ಉಳ್ಳಾಲದ ಜಾಗೃತ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಆನಂದ.ಬಿ ಆಯ್ಕೆ

CO-O
Published on

ಮಂಗಳೂರು: ಜಾಗೃತ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಉಳ್ಳಾಲ ಇದರ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಆನಂದ.ಬಿ ಹಾಗೂ ಉಪಾಧ್ಯಕ್ಷರಾಗಿ ಸುರೇಶ್ ಉಳಿಯ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಬಿ.ನಾಗೇಂದ್ರ ಅವರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು, ನಿರ್ದೇಶಕರಾದ ಯು.ಐತಪ್ಪ ಶೆಟ್ಟಿಗಾರ್, ಲಕ್ಷ್ಮಣ್. ಯು, ಕರುಣಾಕರ್ ಆಳ್ವ, ಉಮಾನಾಥ ನಾಕ್, ಜಗದೀಶ್ ನಾಕ್, ಲೋಕೇಶ್ ಬಿ ಸಾಲ್ಯಾನ್, ಗಣೇಶ್, ದಿಲೀಪ್ ದಾಸ್, ಶಶಿಕಾಂತಿ, ಯು.ಜಾನಕಿ ಪುತ್ರನ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಲ್ಲಿಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net