ಉಳ್ಳಾಲ ಪತ್ನಿಯ ಹತ್ಯೆಗೈದು ಪತಿ ನೇಣಿಗೆ ಶರಣು

ullala
Published on

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಗ್ರಾಮದ ಪಿಲಾರ್ ಬಳಿ ಗುರುವಾರ ಶೀಲ ಶಂಕಿಸಿ ಪತ್ನಿಯ ಕೊಲೆಗೈದು, ಪತಿ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ಶಿವಾನಂದ (55) ಪತ್ನಿ ಶೋಭ (46) ಎಂಬವರನ್ನು ಹತ್ಯೆ ಮಾಡಿ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನುಮಾನ ಸ್ವಭಾವದ ಶಿವಾನಂದ ತನ್ನ ಪತ್ನಿ ಶೋಭಳೊಂದಿಗೆ ಯಾವಾಗಲೂ ಸಣ್ಣ ಪುಟ್ಟ ವಿಷಯಕ್ಕೂ ಜಗಳವಾಡುತ್ತಿದ್ದು, ಈತ ಆಕೆಯನ್ನು ಅನೈತಿಕ ಸಂಬಂದ ಇದೆ ಎನ್ನುವ ಸಂಶಯ ಹೊಂದಿದ್ದ. ಬೆಳಗ್ಗೆಯಿಂದಲೇ ಇಬ್ಬರೂ ಜಗಳವಾಡುತ್ತಿದ್ದರು ಎಂದು ಮಗ ಕಾರ್ತಿಕ್ ತಿಳಿಸಿದ್ದಾನೆ.

ಮಗ ಕೆಲಸಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ. ಮೃತರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. ಪುತ್ರ ತಂದೆ ತಾಯಿಯೊಂದಿಗೆ ವಾಸವಿದ್ದು, ಪುತ್ರಿಯನ್ನು ವಿವಾಹ ಮಾಡಿ ಕೊಡಲಾಗಿದೆ. ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಎಸಿಪಿ ದಿನಕರ ಶೆಟ್ಟಿ, ಉಳ್ಳಾಲ ಇನ್‌ಸ್ಪೆಕ್ಟರ್ ಸಂದೀಪ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net