ಉಳ್ಳಾಗಡ್ಡಿ-ಖಾನಾಪುರ: ದೈತ್ಯಾಕಾರದ ಮೊಸಳೆ ಸೆರೆ

1414
Published on

ಉಳ್ಳಾಗಡ್ಡಿ-ಖಾನಾಪುರ: ಕೋಚರಿಯ ಹಿರಣ್ಯಕೇಶಿ ನದಿಯ ದಡದಲ್ಲಿ ರಾವಸಾಹೇಬ ಮಗದುಮ್ಮ ಎಂಬುವರ ಬಾವಿಯಲ್ಲಿದ್ದ ಮೊಸಳೆ ಸೆರೆ ಹಿಡಿಯಲು ನಿರಂತರ 6 ದಿನಗಳ ಕಾಲ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ಬುಧವಾರ ಯಶಸ್ವಿಯಾಗಿದೆ. ದೈತ್ಯಾಕಾ ರದ ಮೊಸಳೆ ಸೆರೆಸಿಕ್ಕಿದ್ದು, ಮಾ. 11ರಿಂದ ಮೊಸಳೆ ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಸರತ್ತು ಆರಂಭಿಸಿದ್ದರು.

ಭಾರಿ ಗಾತ್ರದ ಮೊಸಳೆಯನ್ನು ಬಾವಿಯಿಂದ ಹೊರತೆಗೆಯಲು ಆಗಿರಲಿಲ್ಲ. ಬಾವಿಯ ನೀರು ಖಾಲಿ ಮಾಡಿದರೂ ಮೊಸಳೆ ಮೇಲೆತ್ತಲಾಗಿರಲಿಲ್ಲ. ಕೊನೆಗೆ ಬಾವಿಗೆ ನೀರು ತುಂಬಿಸಿ, ಮೊಸಳೆ ಹೊರಬರುವಂತೆ ಮಾಡಿ ಸೆರೆ ಹಿಡಿಯಲಾಯಿತು. ಚಿಕ್ಕೋಡಿ ಆರ್‌ಎ್ಒ ಉಮೇಶ ಪ್ರಧಾನಿ ಹಾಗೂ ಹುಕ್ಕೇರಿ ವಲಯ ಉಪ ವಲಯ ಅರಣ್ಯಾಧಿಕಾರಿ ವಿಷ್ಣುಕುಮಾರ, ಸಿಬ್ಬಂದಿ ಮತ್ತು ಸಂಕೇಶ್ವರ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net