

ತಾಳಿಕೋಟೆ: ಸ್ಥಳಿಯ ಪುರಾತನ ಶ್ರೀ ಉಳೇಶ್ವರ ಮಠದ ಉಳೇಶ್ವರರ ಜಾತ್ರಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು.
ಜಾತ್ರಾಮಹೋತ್ಸವ ಅಂಗವಾಗಿ ಶ್ರೀಗಳ ಗದ್ದುಗೆಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಹಾಗೂ ಮಹಾ ಮಂಗಳಾರತಿ ಜರುಗಿತು.
ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಗೀತ ಸಂಜೆ ಹಾಗೂ ನೃತ್ಯ ಕಾರ್ಯಕ್ರಮ ನಡೆದವು. ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಿದರು.
ಸಂಗೀತ ಶಿಕರಾದ ದೀಪಕಸಿಂಗ್ ಹಜೇರಿ, ಕಾಶಿನಾಥ ಕಾರಗನೂರ ಹಾಗೂ ಕುಮಾರಿ ಭಾಗ್ಯ ಇಳಕಲ್ಲ ಸಂಗೀತ ಸೇವೆ ನೀಡಿದರು.
ಆಶ್ರಯ ಲನಿಯ ಮಾರುತೇಶ್ವರ ಚಿಕ್ಕಮಕ್ಕಳ ಭಜನಾ ಮಂಡಳಿಯವರಿಂದ ಅಹೋ ರಾತ್ರಿ ಭಜನೆ ಜರುಗಿತು. ಗಣ್ಯರು, ಸಾಧಕರನ್ನು ಸನ್ಮಾನಿಸಲಾಯಿತು.
ವಿನೋದಕುಮಾರ ಚಿಕ್ಕಮಠ ನೇತೃತ್ವ ವಹಿಸಿದ್ದರು. ಖಾಸ್ಗತೇಶ್ವರ ಮಠದ ವ್ಯವಸ್ಥಾಪಕ ವೇ.ಮುರುಶ ವಿರಕ್ತಮಠ ಹಾಗೂ ಗೋವಿಂದಸಿಂಗ್ ಮೂಲಿಮನಿ, ವುಳ್ಳೇಸಯ್ಯ ಚಿಕ್ಕಮಠ, ಶಿವಯ್ಯ ಹಿರೇಮಠ, ಶಾಂತಯ್ಯ ಹಿರೇಮಠ, ಬಸವರಾಜ ಬಾಗೇವಾಡಿ, ಶ್ರೀಕಾಂತ ಪತ್ತಾರ, ಮಂಜುನಾಥ ಮೀರಜಕರ, ಈರಣ್ಣ ಹಿರೇಮಠ, ಹಿಮ್ಮತಸಿಂಗ್ ಹಜೇರಿ, ಸಂಗಯ್ಯ ದುರ್ಗದಮಠ, ಶ್ರೀನಿವಾಸ ಚವ್ಹಾಣ, ಮೌನೇಶ ಬಡಿಗೇರ, ಶಾಂತಯ್ಯ ವಿಭೂತಿ ಇತರರಿದ್ದರು.